May 21, 2022

Newsnap Kannada

The World at your finger tips!

WhatsApp Image 2022 03 16 at 9.21.37 AM

ಕೂಡ್ಲಿಗಿ ಬಳಿ ಅಪಘಾತ : ರಾಮೇಶ್ವರಕ್ಕೆ ಹೊರಟ್ಟಿದ್ದ ಐವರ ದುರಂತ ಸಾವು – 9 ಮಂದಿ ಗಾಯ

Spread the love

ಕೂಡ್ಲಿಗಿ – ಕ್ರೂಸರ್ ವಾಹನದ ಆಕ್ಸಲ್ ಕಟ್ ಆಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಈ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ರಾ.ಹೆ. 50 ರ ಬಳಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಸಿದ್ದಯ್ಯ ಕಾಳಗಿ (42), ಕಲ್ಲವ್ವ (60), ಕುಂತವ್ವ ಮಸಳಿ (50), ನಿಲ್ಲಮ್ಮ (54) ಹಾಗೂ ಲಕ್ಷ್ಮೀಬಾಯಿ (60) ಘಟನೆಯಲ್ಲಿ ಮೃತ ದುರ್ದೈವಿಗಳು.

ಮೃತ ವ್ಯಕ್ತಿಗಳು ವಿಜಯಪುರ ಜಿಲ್ಲೆಯ ನಿಡಗುಂದಿ ಗ್ರಾಮದ ಸುತ್ತಮುತ್ತಲಿನವರು .ಮೃತರು ರಾಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದು, ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದರೇ, 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!