ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕ್ರೀಮ್ಸಿ ನಿಮಾ ಚಿತ್ರೀಕರಣದ ಫೈಟಿಂಗ್ ಮಾಡುವಾಗ ನಟಿ ಸಂಯುಕ್ತಾ ಹೆಗಡೆಗೆ ಗಂಭೀರವಾಗಿ ಕಾಲಿಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ
‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನು ಓದಿ –ಸಚಿವ ಪಾರ್ಥ ಚಟರ್ಜಿಗೆ ನನ್ನ, ಇನ್ನೊಬ್ಬ ಗೆಳತಿಯ ಮನೆ ಮಿನಿ ಬ್ಯಾಂಕ್ ಅಗಿತ್ತು -ನಟಿ ಅರ್ಪಿತಾ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು (ಜುಲೈ 27) ಸಂಜೆ ‘ಕ್ರೀಮ್’ ಸಿನಿಮಾದ ಶೂಟಿಂಗ್ ವೇಳೆ ಫೈಂಟಿಂಗ್ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಡ್ಯೂಪ್ ಬಳಕೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದರು. ಆದರೆ, ಸಂಯುಕ್ತಾ ಇದಕ್ಕೆ ಒಪ್ಪಿಲ್ಲ. ಹೀಗಾಗಿ, ಅವರೇ ಈ ಸ್ಟಂಟ್ ಮಾಡಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ.

ನಟಿ ಸಂಯುಕ್ತಾ ಅವರು ಈಗ ಚೇತರಿಕೆ ಕಾಣುತ್ತಿದ್ದಾರೆ. ವೈದ್ಯರು 15 ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಅವರಿಗೆ ಕಣ್ಣಿನ ಬಳಿ, ಕಾಲಿಗೆ ಪೆಟ್ಟಾಗಿದೆ. ನಾವು ಡ್ಯೂಪ್ ಬಳಸಲು ಹೇಳಿದೆವು. ಆದರೆ, ಇದಕ್ಕೆ ಸಂಯುಕ್ತಾ ಒಪ್ಪಲಿಲ್ಲ. ಒಂದು ಫೈಟ್ಅನ್ನು ನಿನ್ನೆ (ಜುಲೈ 26) ಶೂಟ್ ಮಾಡಲಾಗಿದೆ. ಇಂದು ಶೂಟ್ ಮಾಡುತ್ತಿದ್ದ ಫೈಟ್ ಶೇ.90 ಭಾಗ ಮುಗಿದಿತ್ತು. ಆಗಲೇ ಈ ರೀತಿ ಆಗಿದೆ. ಇದು ನೈಜ ಘಟನೆ ಆಧರಿಸಿ ಮಾಡಿದ ಸಿನಿಮಾ ಎಂದು ನಿರ್ಮಾಪಕರ ಡಿ.ಕೆ. ದೇವೇಂದ್ರ ಹೇಳಿದ್ದಾರೆ.
- ಶಿವಮೊಗ್ಗದಲ್ಲಿ ಕೋಮು ಗಲಭೆ : ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಹಲವರಿಗೆ ಗಾಯ : 35 ಜನ ಪೊಲೀಸ್ ವಶಕ್ಕೆ
- ಜೀವ ರಕ್ಷಕ CPR -ಪಠ್ಯಕ್ಕೆ ಸೇರಿಸಲು ಚಿಂತನೆ
- ನಟ ನಾಗಭೂಷಣ ಕಾರು ಬೆಂಗಳೂರಿನಲ್ಲಿ ಅಪಘಾತ- ಮಹಿಳೆ ಸಾವು
- ಹೆಚ್ ಡಿ ಕೋಟೆ ಬಳಿ : ನಾಲೆಗೆ ಬಿದ್ದ ಪುತ್ರಿ ರಕ್ಷಣೆಗೆ ಹೋದ ಅಪ್ಪ – ಅಮ್ಮನೂ ದುರಂತ ಸಾವು
- ಅಂತರರಾಷ್ಟ್ರೀಯ ಕಾಫಿ ದಿನ | International Coffee Day 2023
- ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಮರುಪರಿಶೀಲನಾ ಅರ್ಜಿ: ಸಿದ್ದರಾಮಯ್ಯ