‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನು ಓದಿ –ಸಚಿವ ಪಾರ್ಥ ಚಟರ್ಜಿಗೆ ನನ್ನ, ಇನ್ನೊಬ್ಬ ಗೆಳತಿಯ ಮನೆ ಮಿನಿ ಬ್ಯಾಂಕ್ ಅಗಿತ್ತು -ನಟಿ ಅರ್ಪಿತಾ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು (ಜುಲೈ 27) ಸಂಜೆ ‘ಕ್ರೀಮ್’ ಸಿನಿಮಾದ ಶೂಟಿಂಗ್ ವೇಳೆ ಫೈಂಟಿಂಗ್ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಡ್ಯೂಪ್ ಬಳಕೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದರು. ಆದರೆ, ಸಂಯುಕ್ತಾ ಇದಕ್ಕೆ ಒಪ್ಪಿಲ್ಲ. ಹೀಗಾಗಿ, ಅವರೇ ಈ ಸ್ಟಂಟ್ ಮಾಡಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ.
ನಟಿ ಸಂಯುಕ್ತಾ ಅವರು ಈಗ ಚೇತರಿಕೆ ಕಾಣುತ್ತಿದ್ದಾರೆ. ವೈದ್ಯರು 15 ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಅವರಿಗೆ ಕಣ್ಣಿನ ಬಳಿ, ಕಾಲಿಗೆ ಪೆಟ್ಟಾಗಿದೆ. ನಾವು ಡ್ಯೂಪ್ ಬಳಸಲು ಹೇಳಿದೆವು. ಆದರೆ, ಇದಕ್ಕೆ ಸಂಯುಕ್ತಾ ಒಪ್ಪಲಿಲ್ಲ. ಒಂದು ಫೈಟ್ಅನ್ನು ನಿನ್ನೆ (ಜುಲೈ 26) ಶೂಟ್ ಮಾಡಲಾಗಿದೆ. ಇಂದು ಶೂಟ್ ಮಾಡುತ್ತಿದ್ದ ಫೈಟ್ ಶೇ.90 ಭಾಗ ಮುಗಿದಿತ್ತು. ಆಗಲೇ ಈ ರೀತಿ ಆಗಿದೆ. ಇದು ನೈಜ ಘಟನೆ ಆಧರಿಸಿ ಮಾಡಿದ ಸಿನಿಮಾ ಎಂದು ನಿರ್ಮಾಪಕರ ಡಿ.ಕೆ. ದೇವೇಂದ್ರ ಹೇಳಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು