40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ

Team Newsnap
1 Min Read

ಶ್ರೀರಂಗಪಟ್ಟಣ : 40 ಸಾವಿರ ರು ಲಂಚ ಪಡೆಯುವಾಗ ಲೋಕಾಯುಕ್ತ ಪೋಲಿಸರ ಬಲೆಗೆ ಮಳವಳ್ಳಿ ಪುರಸಭೆಯ ಸಮುದಾಯ ವ್ಯವಹಾರ ಅಧಿಕಾರಿಯೊಬ್ಬರು ಸಿಕ್ಕಿ ಬಿದ್ದಿದ್ದಾರೆ.

ಅಧಿಕಾರಿ ಆರ್.ನಾಗೇಂದ್ರ ಶ್ರೀರಂಗಪಟ್ಟಣ ಪುರಸಭೆ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಅಧಿಕಾರಿ ನಾಗೇಂದ್ರ 1 ಲಕ್ಷದ 20 ಸಾವಿರ ರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಆದರೆ ಇಂದು 40 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹಾವೇರಿ ಮೂಲದ ಶಿವರಾಜ್ ಹೊಳ್ಳಾಲ್ ಎಂಬುವವರು ವಿಕಲಚೇತನರಿಗೆ ನೀಡಿದ್ದ ವಾಹನಗಳನ್ನು ವಿತರಿಸಿದ್ದರು. ಇದರ ಬಾಕಿ ಹಣ ಬಿಡುಗಡೆಗೆ ನಾಗೇಂದ್ರ 1.20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು

ಈ ಬಗ್ಗೆ ಶಿವರಾಜ್ ಹೊಳ್ಳಾಲ್ ಮಂಡ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಇಂದು ಡಿವೈಎಸ್ಪಿ ಸುನೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನಾಗೇಂದ್ರ ಅವರನ್ನು ಬಂಧಿಸಿದ್ದಾರೆ.

Share This Article
Leave a comment