February 17, 2026

Newsnap Kannada

The World at your finger tips!

cementry

ಸ್ಮಶಾನದಲ್ಲೇ 15 ಸಾವಿರ ರು ಲಂಚ ಸ್ವೀಕಾರ – ಶಿವಮೊಗ್ಗ ಸಮಾಜ ಕಲ್ಯಾಣ ಅಧಿಕಾರಿ ಲೋಕ ಬಲೆಗೆ

Spread the love

ಶಿವಮೊಗ್ಗ : ಶಿವಮೊಗ್ಗ ನಗರದ ಸಮಾಜ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕರು ಸ್ಮಶಾನದಲ್ಲೇ 15 ಸಾವಿರ ಲಂಚ ಸ್ವೀಕರಿಸುವ ಮುನ್ನ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಪೋಲಿಸರ ಬಲೆಗೆ ಬಿದ್ದವರು.

ಶಿವಮೊಗ್ಗ ತಾಲ್ಲೂಕಿನ ಬುಕ್ಲಾಪುರ ಸ್ಮಶಾನ ಅಭಿವೃದ್ಧಿ ಕಾಮಗಾರಿ ಹಣ ಬಿಡುಗಡೆಗಾಗಿ ಸ್ಮಶಾನದ ಸ್ಥಳ ಪರಿಶೀಲಿಸಿ, ರಿಪೋರ್ಟ್ ನೀಡಲು ಗೋಪಿನಾಥ್ 15 ಸಾವಿರ ಬೇಡಿಕೆ ಇಟ್ಟಿದ್ದರು.ಉರುಳಿಬಿದ್ದ ದಸರಾ ದೀಪಾಲಂಕಾರ ಕಮಾನು

ದೂರುದಾರನಿಂದ ಸ್ಮಶಾನದಲ್ಲಿ 15 ಸಾವಿರ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
ಡಿವೈಎಸ್ಪಿ ಈಶ್ವರ್ ಉಮೇಶ್ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

error: Content is protected !!