ಹುಬ್ಬಳ್ಳಿ : ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿಗಾಗಿ ಕುಂದಗೋಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು 8 ಸಾವಿರ ರು ಲಂಚ ಪಡೆಯುವಾಗ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ನಿವೃತ್ತ ಶಿಕ್ಷಕ ಮಂಜುನಾಥ ಕುರುವಿನಶೆಟ್ಟಿ ಎಂಬುವವರ ಪಿಂಚಣಿ ಹಾಗೂ ಗಳಿಕೆಯ ರಜೆ, ಗುಂಪು ವಿಮೆಗೆ ಸಂಬಂದಪಟ್ಟಂತೆ ಕಾಗದ ಪತ್ರಗಳಿಗೆ ಸಹಿ ಹಾಕಲು ಬಿಇಒ ವಿದ್ಯಾ ಕುಂದರಗಿ 10ಸಾವಿರ ರು ಬೇಡಿಕೆ ಇಟ್ಟಿದ್ದರು.
8 ಸಾವಿರ ನೀಡಲು ಒಪ್ಪಿ ತಮಗೆ ಸತಾಯಿಸಿದ ಬಿಇಒ ನಿವೃತ್ತ ಲಂಚ ಬೇಡಿಕೆ ಕುರಿತಂತೆ ನ. 30ರಂದು ಲೋಕಾಯುಕ್ತಕ್ಕೂ ದೂರು ನೀಡಲಾಗಿತ್ತು .
ಲೋಕಾಯುಕ್ತ ಎಸ್ ಪಿ ಸತೀಶ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ ಪಿ ಶಂಕರ ರಾಗಿ, ಇನ್ಸಪೆಕ್ಟರ್ ಬಸವರಾಜ ಮುಕರ್ತಿಹಾಳ ನೇತೃತ್ವದಲ್ಲಿ ಮಧ್ಯಾಹ್ನ 12-30ರ ಸುಮಾರಿಗೆ ನಿವೃತ್ತ ಶಿಕ್ಷಕರಿಂದ ಎಂಟು ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿ ಹಣ ವಶಪಡಿಸಿಕೊಂಡರು .IND vs AUS : ‘ನಮ್ಮ ಮೆಟ್ರೋ’ ಸೇವೆ ಮಧ್ಯರಾತ್ರಿ 11:45ರ ವರೆಗೂ ವಿಸ್ತರಣೆ
ನಂತರ ಸಂಜೆವರೆಗೆ ಇಲಾಖೆಯ ಕಡತಗಳನ್ನು ಪರಿಶೀಲಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ