H D ಕೋಟೆ BEO ಹಾಗೂ ಕಚೇರಿಯ ಅಧೀಕ್ಷಕ ಸೇರಿ 7 ಸಾವಿರ ರು ಲಂಚ ಸ್ವೀಕಾರ : ACB ಟ್ರ್ಯಾಪ್

Team Newsnap
1 Min Read

ನಿವೃತ್ತಿ ವೇತನ ದಾಖಲಾತಿಗಳನ್ನು ಸಿದ್ದ ಮಾಡಿಕೊಡಲು ನಿವೃತ್ತ ಶಿಕ್ಷಕರೊಬ್ಬರಿಂದ ಹೆಚ್ ಡಿ ಕೋಟೆ ಬಿಇಒ ಹಾಗೂ ಕಚೇರಿ ಅಧೀಕ್ಷಕ ಸೇರಿ 7000 ರು ಲಂಚ ಸ್ವೀಕರಿಸುವ ಮುನ್ನ ಗುರುವಾರ ACB ಬಲೆಗೆ ಬಿದ್ದಿದ್ದಾರೆ.

H D ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ M. ಚಂದ್ರಕಾಂತ್ ಹಾಗೂ ಕಚೇರಿ ಅಧೀಕ್ಷಕ ಶಂಕರ್ ಅವರುಗಳನ್ನೇ ಲಂಚ ಸ್ವೀಕರಿಸುವ ಮುನ್ನ ACB ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು : ಬೆಂಕಿಗೆ ಆಹುತಿ

ಮೈಸೂರು ವಿಭಾಗದ ACB ಎಸ್ ಪಿ J ಸಜೀತ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬಿಇಒ ಚಂದ್ರಕಾಂತ್ 5000 ಹಾಗೂ ಅಧೀಕ್ಷಕ ಶಂಕರ್ 2000 ಲಂಚ ಪಡೆಯುವ ಮುನ್ನವೇ ಟ್ರ್ಯಾಪ್ ಮಾಡಲಾಗಿದೆ.

ನಂಜನಗೂಡು ತಾಲೂಕು ರಾಂಪುರ ನಿವಾಸಿ ನಿವೃತ್ತ ಶಿಕ್ಷಕರೊಬ್ಬರು ಪೆನ್ಷನ್ ದಾಖಲೆಗಳನ್ನು ರೆಡಿ ಮಾಡಿ ಬೆಂಗಳೂರಿನ ಮಾಹಾಲೆಕ್ಕಾಧಿಕಾರಿಗಳ ಕಳಿಸುವ ಸಂಬಂಧ ಬಿಇಒ ಕಚೇರಿಗೆ ಅರ್ಜಿ ಕಳಿಸಿದ್ದರು.

ಕಚೇರಿ ದ್ವಿತೀಯ ದರ್ಜೆ ಸಹಾಯಕ ರವಿ ಎಂಬಾತನು ಈ ಕೆಲಸ ಮಾಡಲು 9 ಸಾವಿರ ರು ಬೇಡಿಕೆ ಇಟ್ಟಿದ್ದನು. ಬಿಇಒಗೆ 5 ಸಾವಿರ, ಅಧೀಕ್ಷಕರಿಗೆ 2. ಹಾಗೂ ತನಗೆ 2 ಸಾವಿರ ರು ಕೊಡುವಂತೆ ಹೇಳಿದ್ದನು.

ಆದರೆ ಇಂದು ರವಿ ಕಚೇರಿಗೆ ರಜೆ ಹಾಕಿದ್ದರಿಂದ ಬಚಾವ್ ಆಗಿದ್ದನು. ಉಳಿದ ಇಬ್ಬರು ಅಧಿಕಾರಿಗಳು ಬಲೆಗೆ ಬಿದ್ದು ಬಂಧನಕ್ಕೆ ಒಳಗಾಗಿದ್ದಾರೆ.ರವಿಯ ಬಂಧನಕ್ಕೂ ಬಲೆ ಬೀಸಲಾಗಿದೆ.

Share This Article
Leave a comment