ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್‌- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ಜಪ್ತಿ

Team Newsnap
1 Min Read

ಬೆಂಗಳೂರಿನ ಬಿಡಿಎ ಭೂ ಸ್ವಾಧೀನ ವಿಭಾಗ, ಕಾರ್ಯದರ್ಶಿಗಳ ಕಚೇರಿಗಳ ಮೇಲೆ ನಿನ್ನೆ ನಡೆದ ಎಸಿಬಿ
ದಾಳಿಯಲ್ಲಿ ಭಾರಿ ಪ್ರಮಾಣದ ನೋಟು ಕಂತೆಗಳು ಸಿಕ್ಕಿವೆ

ಡಿಎಸ್ 1,2,3,4 ಕಚೇರಿಗಳು ಹಾಗೂ ಅವರ ಅಪ್ತರ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಭೂ ಸ್ವಾಧೀನ ವಿಭಾಗದಲ್ಲಿ ಸ್ವಾಧೀನ ಜಾಗಕ್ಕೆ ಪರಿಹಾರ ಸೈಟ್ ನೀಡುವಲ್ಲಿ ಅಕ್ರಮ, ಪರಿಹಾರದ ಹಣ ನೀಡುವಲ್ಲಿ ಅಕ್ರಮ ದೂರುಗಳು ಕೇಳಿ ಬಂದಿದ್ದವು.

ದಾಳಿ ವೇಳೆ ಬಿಡಿಎ ಡೆಪ್ಯುಟಿ ಸೆಕ್ರೆಟರಿ ನವೀನ್ ಜೋಸೆಫ್ ಕಚೇರಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಹಣವನ್ನು ವಶಕ್ಕೆ ಪಡೆದು ಪರಿಶೀಲನೆ ಮುಂದುವರಿಸಲಾಗಿದೆ.

ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಗೆ ಎಸಿಬಿ ಶಾಕ್‌ ನೀಡಿದ್ದಾರೆ ಏಕಕಾಲಕ್ಕೆ 60ಕ್ಕೂ ಹೆಚ್ಚು ಅಧಿಕಾರಿಗಳು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ನೇತೃತ್ವದಲ್ಲಿ ಖುದ್ದು ಮೂವರು ಎಸ್‌ಪಿಗಳು ಬಿಡಿಎ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.

ಕಚೇರಿಯಲ್ಲಿದ್ದ ಎಂಟು ಅಧಿಕಾರಿಗಳ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಪಾರ್ಕಿಂಗ್‍ನಲ್ಲಿರುವ ವಾಹನಗಳು ಹಾಗೂ ಹೊರಗಿದ್ದವರನ್ನೂ ಪರಿಶೀಲನೆ ನಡೆಸಲಾಗಿದೆ.

ಫಾರ್ಚೂನರ್ ಕಾರ್‌ವೊಂದರಲ್ಲಿ ಬ್ಯಾಗ್‌ಗಟ್ಟಲೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಕಾರು ಮತ್ತು ಚಾಲಕನನ್ನು ಅಧಿಕಾರಿಗಳು ವಶಕ್ಕೆ ಪಡೆದರು. ನಂತರ ಸಂಬಂಧಪಟ್ಟ ಮಾಲೀಕನಿಗೆ ಫೋನ್‌ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಲಾಯಿತು.

ಕಾರಿನಲ್ಲಿ ಸೀಲ್‌ಗಳು ಪತ್ತೆಯಾಗಿದ್ದು, ಎಸಿಬಿ ತಂಡ ಪರಿಶೀಲನೆ ನಡೆಸಿತು. ಇದೇ ವೇಳೆ ಕಚೇರಿಯ ಹೊರಗೆ ಹಾಗೂ ಒಳಗಡೆ ಇದ್ದ ಸಾರ್ವಜನಿಕರನ್ನೂ ಪರಿಶೀಲನೆಗೆ ಒಳಪಡಿಸಲಾಯಿತು.

Share This Article
Leave a comment