December 19, 2024

Newsnap Kannada

The World at your finger tips!

acb 1

ರಾಜ್ಯದ 18 ಸರ್ಕಾರಿ ಅಧಿಕಾರಿಗಳ ಕಚೇರಿ ನಿವಾಸ ಸೇರಿ 78 ಕಡೆ ACB ರೇಡ್

Spread the love

ರಾಜ್ಯದ ಬೆಂಗಳೂರು ಸೇರಿದಂತೆ 78 ಕಡೆ ಬುಧವಾರ ಬೆಳ್ಳಂಬೆಳಿಗ್ಗೆ 18 ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರಿನ ಮೂವರು ಅಧಿಕಾರಿಗಳ ಮನೆ ಸೇರಿ ಏಕ ಕಾಲಕ್ಕೆ 78 ಕಡೆಗಳಲ್ಲಿ ದಾಳಿ ಮಾಡಿದ್ದಾರೆ, 200 ಅಧಿಕಾರಿಗಳ ತಂಡ ಗದಗ, ರಾಯಚೂರು ಸೇರಿದಂತೆ 18 ಅಧಿಕಾರಿಗಳ ಮನೆ ಈ ದಾಳಿಯನ್ನು ಮಾಡಿದ್ದಾರೆ.

ಬೆಂಗಳೂರಿನ ಬಿಡಿಎ ಅಧಿಕಾರಿ ರಾಕೇಶ್ ಕುಮಾರ್, ಸಾರಿಗೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಹಾಗೂ ವಾಣಿಜ್ಯ ಇಲಾಖೆಯ ಜಂಟಿ ನಿದೇ೯ಶಕ ಬಿ ಕೆ ಶಿವಕುಮಾರ್ ಅವರುಗಳ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ .

ರಾಯಚೂರಿನ ಅಶೋಕ್ ನಗರದಲ್ಲಿರುವ ಕೆಬಿಜೆಎನ್ ಎಲ್ ಎಇಇ ಅಶೋಕ್ ರೆಡ್ಡಿ ಡಿವೈಎಸ್ ಪಿ , ವಿಜಯ್ ಕುಮಾರ್ ನೇತೃತ್ವದಲ್ಲಿ ಹಾಗೂ ಗದಗ್ ನ ಡಿಸಿ ಕಚೇರಿಯ ಉಪ ತಹಶೀಲ್ದಾರ್ ಬಿ ಎಸ್ ಅಣ್ಣೀಗೆರೆ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಮ್ಯಾನೇಜರ್ ಗೋಪಿನಾಥ್ ಮಲಜಿ ಹಾಗೂ ಕಚೇರಿ ಅಕೌಂಟೆಂಟ್ ಮಲ್ಲಮ್ಮ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

ರಾಜ್ಯದ ಯಾವ ಅಧಿಕಾರಿಗಳ ನಿವಾಸ – ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂಬ ಪಟ್ಟಿ ಹೀಗಿದೆ

  1. ಜ್ಞಾನೇಂದ್ರಕುಮಾರ್, ಹೆಚ್ಚುವರಿ ಆಯುಕ್ತರು, ಸಾರಿಗೆ ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ ಬೆಂಗಳೂರು
  2. ರಮೇಶ್ ಕುಮಾರ್, ಕಣಕಟ್ಟೆ, ಆರ್.ಎಫ್.ಓ.ಸಾಮಾಜಿಕ ಅರಣ್ಯ ಯಾದಗಿರಿ
  3. ರಾಕೇಶ್ ಕುಮಾರ್ BDA. ಪಟ್ಟಣ ಯೋಜನೆ.
  4. ಬಸವ ಕುಮಾರ್ ಎಸ್ ಅಣ್ಣಿಗೇರಿ .ಶಿರಸ್ತೇದಾರ್ ಡಿಸಿ ಕಚೇರಿ ಗದಗ
  5. ಬಸವರಾಜ್ ಶೇಖರ್ ರೆಡ್ಡಿ ಪಾಟೀಲ್, ಕಾರ್ಯನಿರ್ವಾಹಕ ಅಭಿಯಂತರ, ಕೌಜಲಗಿ ವಿಭಾಗ, ಗೋಕಾಕ್
  6. ಗೋಪಿನಾಥ್ ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ
  7. ಬಿ ಕೆ ಶಿವಕುಮಾರ್, ಹೆಚ್ಚುವರಿ ಡಿಟೆಕ್ಟರ್,ಇಂಡಸ್ಟ್ರಿವ್ಸ್ ಮತ್ತು ಕಾಮರ್ಸ್ ಬೆಂಗಳೂರು
  8. ಶಿವಾನಂದ್ ಪಿ ಶರಣಪ್ಪ ಖೇಡಗಿ, RFO, ಬಾದಾಮಿ
  9. ಮಂಜುನಾಥ್, ಸಹಾಯಕ ಆಯುಕ್ತ ರಾಮನಗರ
  10. ಶ್ರೀನಿವಾಸ್ ಜನರಲ್ ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ.
  11. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ ದಾವಣಗೆರೆ
  12. ಕೃಷ್ಣನ್.ಎಇ.ಎಪಿಎಂಸಿ ಹಾವೇರಿ.
  13. ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು
  14. ಗಿರೀಶ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಸುವಿವಿಭಾಗ…
  15. ಬಾಲಕೃಷ್ಣ ಹೆಚ್ ಎನ್.ಪೊಲೀಸ್ ಇನ್ಸ್ ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ. ಮೈಸೂರು
  16. ಗವಿರಂಗಪ್ಪ. ಎಇಇ. ಪಿಡಬ್ಲ್ಯೂಡಿ. ಚಿಕ್ಕಮಗಳೂರು
  17. ಅಶೋಕ್ ರೆಡ್ಡಿ ಪಾಟೀಲ್. ಎಇಇ.ಕೃಷ್ಣ ಭಾಗ್ಯ ಜಲ ನಿಗಮ ಲಿ.ದೇವದುರ್ಗ ರಾಯಚೂರು..
  18. ದಯಾ ಸುಂದರ್ ರಾಜು AEE.KPTCL, ದಕ್ಷಿಣ ಕನ್ನಡ

Copyright © All rights reserved Newsnap | Newsever by AF themes.
error: Content is protected !!