January 29, 2026

Newsnap Kannada

The World at your finger tips!

nagaratnamma

ಎಸಿಬಿ ದಾಳಿಗೊಳಗಾಗಿದ್ದ ಅಧಿಕಾರಿ ನಾಗರಾಜ್ ಪತ್ನಿ ನಾಗರತ್ನಮ್ಮ ನಿಧನ

Spread the love

ಕಳೆದವಾರ ಎಸಿಬಿ ದಾಳಿಗೆ ಒಳಗಾಗಿದ್ದ ನೆಲಮಂಗಲದ ಅಧಿಕಾರಿ  ಎಲ್. ಸಿ ನಾಗರಾಜು ಪತ್ನಿ ನಗರತ್ನಮ್ಮ( 53)
ಹೃದಯಾಘಾತದಿಂದ ಸಾವನ್ನಪ್ಪಿದರು.

ಕಳೆದ ಸೋಮವಾರ ನಾಗರಾಜು ಪತ್ನಿ ಅವರಿಗೆ ಹೃದಯಾಘಾತವಾದ ಹಿನ್ನೆಲೆ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇನಾಗರತ್ನಮ್ಮ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಕೊನೆಯುಸಿರೆಳದಿದ್ದಾರೆ.

ಎಲ್. ಸಿ. ನಾಗರಾಜ್, ಸಕಾಲ ಸೇವೆಗಳಲ್ಲಿ  ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನವೆಂಬರ್​ 24 ರಂದು ಇವರ ಮನೆ ಮೇಲೆ  ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್​ ನೀಡಿದ್ದರು .

ಈ ವೇಳೆ ಅಧಿಕಾರಿಯ ಮನೆಯಲ್ಲಿ 1,76 ಗ್ರಾಂ ಚಿನ್ನಾಭರಣಗಳು, 43,00,000 ಲಕ್ಷ  ನಗದು ಪತ್ತೆಯಾಗಿತ್ತು. ಜೊತೆಗೆ  ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದಲ್ಲಿ 1 ವಾಸದ ಮನೆ ಹಾಗೂ ಸುಮಾರು 11 ಎಕರೆ 25 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು ಪತ್ತೆಯಾಗಿದ್ದವು.

error: Content is protected !!