ಕೊರೊನಾ ಲಸಿಕೆ ಪಡೆದರೆ ಶೇ. 97. 5 ರಷ್ಟು ಸಾವಿನ‌ ಸಾಧ್ಯತೆ ಇಲ್ಲ : ಅಧ್ಯಯನ ವರದಿ

Team Newsnap
1 Min Read

ಕರೊನಾ ಲಸಿಕೆಯ ಮೊದಲ ಡೋಸ್ ಸಾವಿನ ಸಾಧ್ಯತೆಯನ್ನು ಶೇಕಡ 97.5ರಷ್ಟು ತಡೆಯುತ್ತದೆ ಹಾಗೂ 2ನೇ ಡೋಸ್​ನ ಪರಿಣಾಮ ಶೇ, 97.5ರಷ್ಟಿರುತ್ತದೆ ಎಂದು ಹೊಸ ಅಧ್ಯಯನದಿಂದ ಮಾಹಿತಿ ಬಹಿರಂಗವಾಗಿದೆ.

ಏಪ್ರಿಲ್-ಮೇನಲ್ಲಿ ಎರಡನೇ ಅಲೆ ವೇಳೆ ಲಸಿಕೆ ಪಡೆಯದವರಲ್ಲೇ ಹೆಚ್ಚಿನ ಮರಣ ದಾಖಲಾಗಿದೆ.
ಹೀಗಾಗಿ ಸೋಂಕು ತಡೆಗೆ ಲಸಿಕೆ ಪರಿಣಾಮಕಾರಿ ಎಂಬುದು ಋಜುವಾತಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ‘

ವೈರಸ್ ವಿರುದ್ಧ ವ್ಯಾಕ್ಸಿನ್ ಅತ್ಯಂತ ಮಹತ್ವದ ಗುರಾಣಿಯಾಗಿದೆ’ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ.

ಕರೊನಾ ತಡೆಗಾಗಿ ಮೂಗಿನ ಮೂಲಕ ನೀಡುವಂಥ ಭಾರತ್ ಬಯೋಟೆಕ್​ನ ಬಿಬಿವಿ154 ಲಸಿಕೆಯ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಲಿವರ್ ಆಂಡ್ ಬಿಲಿಯರಿ ಸೈನ್ಸಸ್ ಸಂಸ್ಥೆ ಹಾಗೂ ಗುರುನಾನಕ್ ಆಸ್ಪತ್ರೆ, ಹರಿಯಾಣದ ಪಲ್ವಾಲ್​ನಲ್ಲಿರುವ ಇನ್​ಕ್ಲೆನ್ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ. ಎರಡರಿಂದ ಮೂರು ವಾರಗಳಲ್ಲಿ ಪರೀಕ್ಷೆ ಆರಂಭವಾಗುವ ನಿರೀಕ್ಷೆಯಿದೆ.

18-60 ವಯೋಗುಂಪಿನ ಆರೋಗ್ಯ ಸ್ವಯಂಸೇವಕರಲ್ಲಿ ಜೂನ್ ತಿಂಗಳಲ್ಲೇ ಭಾರತ್ ಬಯೋಟೆಕ್ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ.

ವೃದ್ಧರಲ್ಲಿ ಕೇಸ್ ಜಾಸ್ತಿ

ಲಸಿಕೆಯ ಸಂಪೂರ್ಣ ಡೋಸ್ ಪಡೆದರೂ ಕೋವಿಡ್ ಸೋಂಕು ತಗಲುವ ಅಪಾಯ ವೃದ್ಧರು ಹಾಗೂ ಅನ್ಯವ್ಯಾಧಿಗಳಿಂದ ಬಳಲುತ್ತಿರುವವರಲ್ಲಿ ಜಾಸ್ತಿಯಿದೆ. ಸಂಪೂರ್ಣ ಲಸಿಕೆ ಪಡೆದವರಲ್ಲಿ ಕರೊನಾ ಸೋಂಕು ದೃಢಪಟ್ಟ 12,908 ಗಂಭೀರ ಪ್ರಕರಣಗಳು ಆಗಸ್ಟ್ 30ರ ವರೆಗೆ ತನಗೆ ಬಂದಿವೆ.

ಸುಮಾರು ಶೇ. 70 ರಷ್ಟು ಪ್ರಕರಣಗಳು 65 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬಂದಿದೆ. ಮೃತಪಟ್ಟವರಲ್ಲಿ ಶೇ. 87ರಷ್ಟು ಮಂದಿ ಕೂಡ 65 ವರ್ಷ ಮೇಲಿನವರು ಎಂದೂ ಸಿಡಿಸಿ ಹೇಳಿದೆ.

Share This Article
Leave a comment