ಕರೊನಾ ಲಸಿಕೆಯ ಮೊದಲ ಡೋಸ್ ಸಾವಿನ ಸಾಧ್ಯತೆಯನ್ನು ಶೇಕಡ 97.5ರಷ್ಟು ತಡೆಯುತ್ತದೆ ಹಾಗೂ 2ನೇ ಡೋಸ್ನ ಪರಿಣಾಮ ಶೇ, 97.5ರಷ್ಟಿರುತ್ತದೆ ಎಂದು ಹೊಸ ಅಧ್ಯಯನದಿಂದ ಮಾಹಿತಿ ಬಹಿರಂಗವಾಗಿದೆ.
ಏಪ್ರಿಲ್-ಮೇನಲ್ಲಿ ಎರಡನೇ ಅಲೆ ವೇಳೆ ಲಸಿಕೆ ಪಡೆಯದವರಲ್ಲೇ ಹೆಚ್ಚಿನ ಮರಣ ದಾಖಲಾಗಿದೆ.
ಹೀಗಾಗಿ ಸೋಂಕು ತಡೆಗೆ ಲಸಿಕೆ ಪರಿಣಾಮಕಾರಿ ಎಂಬುದು ಋಜುವಾತಾಗಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ‘
ವೈರಸ್ ವಿರುದ್ಧ ವ್ಯಾಕ್ಸಿನ್ ಅತ್ಯಂತ ಮಹತ್ವದ ಗುರಾಣಿಯಾಗಿದೆ’ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ.
ಕರೊನಾ ತಡೆಗಾಗಿ ಮೂಗಿನ ಮೂಲಕ ನೀಡುವಂಥ ಭಾರತ್ ಬಯೋಟೆಕ್ನ ಬಿಬಿವಿ154 ಲಸಿಕೆಯ ಎರಡು ಮತ್ತು ಮೂರನೇ ಹಂತದ ಪರೀಕ್ಷೆಗಳನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಲಿವರ್ ಆಂಡ್ ಬಿಲಿಯರಿ ಸೈನ್ಸಸ್ ಸಂಸ್ಥೆ ಹಾಗೂ ಗುರುನಾನಕ್ ಆಸ್ಪತ್ರೆ, ಹರಿಯಾಣದ ಪಲ್ವಾಲ್ನಲ್ಲಿರುವ ಇನ್ಕ್ಲೆನ್ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ. ಎರಡರಿಂದ ಮೂರು ವಾರಗಳಲ್ಲಿ ಪರೀಕ್ಷೆ ಆರಂಭವಾಗುವ ನಿರೀಕ್ಷೆಯಿದೆ.
18-60 ವಯೋಗುಂಪಿನ ಆರೋಗ್ಯ ಸ್ವಯಂಸೇವಕರಲ್ಲಿ ಜೂನ್ ತಿಂಗಳಲ್ಲೇ ಭಾರತ್ ಬಯೋಟೆಕ್ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿದೆ.
ವೃದ್ಧರಲ್ಲಿ ಕೇಸ್ ಜಾಸ್ತಿ
ಲಸಿಕೆಯ ಸಂಪೂರ್ಣ ಡೋಸ್ ಪಡೆದರೂ ಕೋವಿಡ್ ಸೋಂಕು ತಗಲುವ ಅಪಾಯ ವೃದ್ಧರು ಹಾಗೂ ಅನ್ಯವ್ಯಾಧಿಗಳಿಂದ ಬಳಲುತ್ತಿರುವವರಲ್ಲಿ ಜಾಸ್ತಿಯಿದೆ. ಸಂಪೂರ್ಣ ಲಸಿಕೆ ಪಡೆದವರಲ್ಲಿ ಕರೊನಾ ಸೋಂಕು ದೃಢಪಟ್ಟ 12,908 ಗಂಭೀರ ಪ್ರಕರಣಗಳು ಆಗಸ್ಟ್ 30ರ ವರೆಗೆ ತನಗೆ ಬಂದಿವೆ.
ಸುಮಾರು ಶೇ. 70 ರಷ್ಟು ಪ್ರಕರಣಗಳು 65 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬಂದಿದೆ. ಮೃತಪಟ್ಟವರಲ್ಲಿ ಶೇ. 87ರಷ್ಟು ಮಂದಿ ಕೂಡ 65 ವರ್ಷ ಮೇಲಿನವರು ಎಂದೂ ಸಿಡಿಸಿ ಹೇಳಿದೆ.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
More Stories
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!