November 24, 2024

Newsnap Kannada

The World at your finger tips!

Army

ಯುವಕರ ಬಾಳಿಗೆ ಉದ್ಯೋಗದ ಆಶಾಕಿರಣ; ‘ಅನಂತ ಸೇನಾ ಪೂರ್ವ ತರಬೇತಿ ಅಕಾಡೆಮಿ’

Spread the love

ಭಾರತ ಯುವ ಶಕ್ತಿ ಅದಮ್ಯ ಚೇತನಗಳು ಇದ್ದಂತೆ. ಆದರೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಯುವಶಕ್ತಿ ಹಾದಿ ತಪ್ಪುತ್ತದೆ ಎಂಬ ಭಯ ಸದಾ ಕಾಡುತ್ತದೆ. ಎಲ್ಲ ಯುವಕರಿಗೆ ಸರ್ಕಾರಿ ಉದ್ಯೋಗ, ವ್ಯಾಪಾರ, ಸ್ವಯಂ ಉದ್ಯೋಗ ಕಲ್ಪಿಸಿಕೊಡಲು ಸುಲಭದ ಮಾತಲ್ಲ. ಮತ್ತು ಎಲ್ಲವನ್ನು ಸರ್ಕಾರವೇ ಮಾಡಲಿ ಎಂಬ ನಿರೀಕ್ಷೆ ಹೊಂದುವುದು ಕೂಡ ಕೆಲವೊಮ್ಮೆ ಎಡವಟ್ಟಾಗುತ್ತದೆ. ಸ್ವಪ್ರಯತ್ನ ಹಾಗೂ ವಿಫಲತೆಯ ನಡುವೆಯೂ ಭರವಸೆಯ ಕನಸನ್ನು ತೆಗೆದುಕೊಂಡ ಉದ್ಯೋಗವನ್ನು ಪಡೆಯುವ ಕಲೆ ಯುವ ಸಮುದಾಯದಲ್ಲಿ ಸೃಷ್ಟಿಯಾದರೆ ಅನುಕೂಲಕರ ವಾತಾವರಣ ನಿರ್ಮಿಸುವುದು ತುಂಬಾ ಸುಲಭವೆನಿಸುತ್ತದೆ.

WhatsApp Image 2022 05 17 at 7.39.43 AM 2

ಇಂತಹ ಒಂದು ಪರಿಕಲ್ಪನೆಯಲ್ಲಿ ಇಂದಿನ ಸ್ಪರ್ಧಾತ್ಮಕಯುಗದಲ್ಲಿ ದಾರಿ ತಪ್ಪುವ ಯುವಕರನ್ನು, ಸರಿದಾರಿಗೆ ತರುವ ಪ್ರಯತ್ನಕ್ಕೆ ನಾಂದಿಹಾಡಿರುವುದು, ಅಭಿನವ ಭಾರತಿ ಶಿಕ್ಷಣ ಸಂಸ್ಥೆ, ಹಾಗೂ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ತಾಯ್ನಾಡಿನ ಸೇವೆಗೆ ಹೊಸ ಮಾರ್ಗ ಕಂಡು ಹಿಡಿದುಕೊಂಡಿದೆ.

ಸೇನೆ ತರಬೇತಿಯೂ ಉದ್ಯೋಗದ ಮೂಲವೇ :

ಕೃಷಿ ಕ್ಷೇತ್ರದಲ್ಲಿ ದುಡಿಯಬೇಕಾದ ಯುವಕರು ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಕೃಷಿಯಲ್ಲಿ ಮಾಡುವ ಸಾಧನೆ ಸಂಪಾದನೆಗಿಂತ ಸರ್ಕಾರಿ ನೌಕರಿಯೇ ಮೇಲೂ ಎಂಬ ಮನೋಭಾವನೆ ಆಳವಾಗಿ ಬೇರೂರಿದೆ. ಈ ಕಾರಣಕ್ಕಾಗಿ ಉದ್ಯೋಗ ಕ್ಷೇತ್ರದಲ್ಲಿ ಯುವಕರು ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ಉದ್ಯಮ ಆರಂಭಿಸಲು ಬಂಡವಾಳದ ಕೊರತೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಯುವಕರನ್ನು ನಿರಾಶೆಯಾಗುವಂತೆ ಮಾಡುತ್ತದೆ. ಕೊನೆಗೆ ಸರ್ಕಾರಿ ಉದ್ಯೋಗವೇ ಮೇಲೂ ಎನ್ನುವ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮಾಡಿದ್ದರೆ ಅಥವಾ ಪದವಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರೆ ಯುವಕರಿಗೆ ಉದ್ಯೋಗ ದೀವಿಗೆಯಾಗಿ ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಸ್ವ ಉದ್ಯೋಗ ಅವಕಾಶ ಕಲ್ಪಿಸುವ ಹಾಗೂ ಉದ್ಯೋಗ ಲಭ್ಯತೆಗೆ ಅವಶ್ಯಕವಾಗುವ ತರಬೇತಿಗಳನ್ನು ನೀಡಿ ಉದ್ಯೋಗದಾರತನ್ನಾಗಿ ಮಾಡುವ ಸಂಕಲ್ಪ ಮಾಡಿದೆ.

ಹೊಸ ಹೆಜ್ಜೆ – ಹೊಸ ಪ್ರಯತ್ನ :

WhatsApp Image 2022 05 17 at 7.39.44 AM

ಇತ್ತೀಚಿನ ದಿನಗಳಲ್ಲಿ ಇನ್ನು ಕೆಲವು ಯುವಕರು ಜೀವನದ ಉದ್ದೇಶ ಮತ್ತು ಸೇವಾ ಮನೋಭಾವನೆ ಇಟ್ಟುಕೊಂಡು ಪೋಲಿಸ್ ಕೆಲಸಕ್ಕೆ,ಇಲ್ಲವೇ ಮಿಲಿಟರಿ ಉದ್ಯೋಗಕ್ಕೂ ಪ್ರಯತ್ನಿಸುತ್ತಿದ್ದಾರೆ.ಇವುಗಳಿಗೆ ಆಯ್ಕೆಯಾಗಲು ಉತ್ತಮ ದೇಹದಾಢ್ರ್ಯ,ಉತ್ತಮ ಕಸರತ್ತು,ಕಠಿಣ ಪರಿಶ್ರಮ ಬೇಕು.ಪೋಲಿಸ್,ಮಿಲಿಟರಿ ನೇಮಕಾತಿ ಮೇಳದ ಸಂದರ್ಭದಲ್ಲಿ ಕನಸುಗಳನ್ನು ಹೊತ್ತ ಸಾವಿರಾರು ಯುವಕರು ರಾಜ್ಯದ ಮೂಲೆಮೂಲೆಗಳಿಂದ ಬಂದು ಭಾಗವಹಿಸುತ್ತಾರೆ. ಆದರೆ ಕೆಲಸ ಸಿಗುವುದು ಕೆಲವೇ ಮಂದಿಗೆ ಮಾತ್ರ.ಆಯ್ಕೆಯಾಗದವರಿಗೆ ತರಬೇತಿ ಮಾರ್ಗದರ್ಶನದ ಕೊರತೆ ಇದೆ ಎಂಬುದು ಎದ್ದು ಕಾಣುತ್ತದೆ.ಇಂತಹ ಯುವಕರಿಗೆ ತರಬೇತಿ, ಮಾರ್ಗದರ್ಶನ ಮಾಡುವ ಸಂಸ್ಥೆಗಳು ಕೇವಲ ಬೆರಳೆಣಿಕೆಯಷ್ಟಿವೆ.ಇದ್ದರೂ ಉತ್ತರ ಕರ್ನಾಟಕದಲ್ಲಿ ಕೇಂದ್ರೀಕೃತಗೊಂಡಿವೆ.ದಕ್ಷಿಣ ಕರ್ನಾಟಕದಲ್ಲಿ ಇಲ್ಲವೇ ಇಲ್ಲವೆನ್ನಬಹುದು.ಇದೀಗ ಇದಕ್ಕೆಲ್ಲ ಉತ್ತರವೆಂಬಂತೆ ಮಂಡ್ಯದಲ್ಲಿ ‘ಅನಂತ ಸೇನಾ ಪೂರ್ವ ತರಬೇತಿ ಅಕಾಡೆಮಿ’ಯನ್ನು ಬರುವ ಜೂನ್ ವೇಳೆಗೆ ತೆರೆಯುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ.

‘ಅನಂತ’ ಚಿಂತನವೇ ಸ್ಪೂರ್ತಿಯ ಸೆಲೆ :

army training

70 ರ ದಶಕದಲ್ಲಿ ದೂರದ ಕಾಶಿಯಿಂದ ಮಂಡ್ಯಕ್ಕೆ ಕಾಲಿರಿಸಿದ್ದ ದೂರದೃಷ್ಟಿ ಚಿಂತನೆಯ,ರಾಷ್ಟ್ರಪ್ರೇಮಿ,ಶಿಕ್ಷಣ ಪ್ರೇಮಿ,ಅಧ್ಯಾತ್ಮ ಸಾಧಕ ಶ್ರೀ ಅನಂತಕುಮಾರ ಸ್ವಾಮೀಜಿಯವರು ಅಭಿನವ ಭಾರತಿ ವಿದ್ಯಾಸಂಸ್ಥೆ ಸ್ಥಾಪಿಸಿ ಮಂಡ್ಯ ಶಿಕ್ಷಣ ಕಾಶಿ ಎನಿಸಿಕೊಳ್ಳುವಂತೆ ರೂಪಿಸಿದರು.ಅವರ ನಿಧನಾನಂತರ ‘ಏನಾದರೂ ಮಾಡು, ನಿನ್ನ ಗುರಿಯೆಡೆಗೆ ಲಕ್ಷ್ಯವಿಡು’ ಎಂಬ ಶ್ರೀ ಅನಂತಕುಮಾರ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಅವರ ಆಶಯಗಳ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವ ಕ್ರಿಯಾಶೀಲ ಅಧ್ಯಕ್ಷ ಶಿವಮೂರ್ತಿ ಕೀಲಾರ ವಿಭಿನ್ನ ಆಲೋಚನೆಯೊಂದಿಗೆ ನಮ್ಮ ಯುವಶಕ್ತಿಯನ್ನು ಸರಿದಾರಿಗೆ ಮುನ್ನಡೆಸುವ ನಿಟ್ಟಿನಲ್ಲಿ ‘ನಮ್ಮ ಮುಂದಿನ ನಡೆ,ಯೋಧರ ಕಡೆ’,’ನಮ್ಮ ಮುಂದಿನ ಚಿತ್ತ,ಯೋಧರ ತರಬೇತಿಯತ್ತ’,ಭಾರತಾಂಬೆಯ ರಕ್ಷಣೆ ನಮ್ಮೆಲ್ಲರ ಹೊಣೆ,ಯೋಧರ ಎದೆಬಡಿತ ದೇಶದ ನಾಡಿಮಿಡಿತ ಎಂಬ ಘೋಷಣೆಗಳೊಂದಿಗೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಕಡಿಮೆ ಶುಲ್ಕ – ಹೆಚ್ಚು ಭರವಸೆ :

ಅಭಿನವ ಭಾರತಿ ಶಿಕ್ಷಣ ಸಂಸ್ಥೆ,ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಯ್ನಾಡಿನ ಸೇವೆಗೆ ತಮ್ಮ ಬದುಕನ್ನು ಮೀಸಲಿಡುವ ಯೋಧರಿಗಾಗಿ ಮದ್ದೂರು ತಾಲ್ಲೂಕು ಮೂಡಲದೊಡ್ಡಿಯಲ್ಲಿ ‘ಅನಂತ ಸೇನಾ ಪೂರ್ವ ತರಬೇತಿ ಅಕಾಡೆಮಿ’ ಕೇಂದ್ರ ಸ್ಥಾಪಿಸುವ ಕಾರ್ಯಕ್ಕೆ ಅಡಿ ಇರಿಸಿದ್ದಾರೆ. ಹಳೆ ಮೈಸೂರು ಪ್ರಾಂತ್ಯದ ಗ್ರಾಮೀಣ ಪ್ರದೇಶದ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಮಿಲಿಟರಿ ಸೇರ್ಪಡೆಗೆ ಪ್ರೊತ್ಸಾಹಿಸುವ ಉದ್ದೇಶದೊಂದಿಗೆ ಭೂಸೇನೆ, ನೌಕಾಪಡೆ, ವಾಯುಪಡೆ ,ಬಿಎಸ್‍ಎಫ್, ಸಿಆರ್‍ಪಿಎಫ್, ಫಾರೆಸ್ಟ್ ಗಾರ್ಡ್, ರೈಲ್ವೆ ಪೋಲಿಸ್ , ಪೋಲಿಸ್ ಸಬ್ ಇನ್ಸ್ಪೆಕ್ಟರ್, ಪೋಲಿಸ್ ಪೇದೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ನೇಮಕಾತಿಗೆ ಬೇಕಾದ ಪೂರ್ವ ತಯಾರಿ, ತರಬೇತಿ ನೀಡಿ ಭಾರತೀಯ ಸೇನಾ ಪರೀಕ್ಷೆಗಳನ್ನು ಎದುರಿಸಲು ಸಿದ್ಧಗೊಳಿಸುವ ಇರಾದೆ ನೂತನ ಸಂಸ್ಥೆಗಿದ್ದು ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ರಾಷ್ಟ್ರಸೇವೆ ಬಯಸುವ ಯುವ ಆಕಾಂಕ್ಷಿಗಳಿಗೆ ಎಸ್ಸೆಸ್ಸೆಲ್ಸಿ/ಪಿಯುಸಿಯಲ್ಲಿ, ಉತ್ತೀರ್ಣ/ ಅನುತ್ತೀರ್ಣರಾಗಿದ್ದರೂ ಅಕಾಡೆಮಿಯ ಮೂಲಕ ವೃತ್ತಿ ಜೀವನ ನಿರ್ಮಿಸಿಕೊಳ್ಳಲು ಉತ್ತಮ ಅವಕಾಶ ಸೃಷ್ಟಿಸಿ ಸೇವೆ ಮಾಡುವ ಉದ್ದೇಶ ಅಕಾಡೆಮಿಗಿದೆ.

ಈ ಕೆಲಸಕ್ಕೆ ಪೂರಕವಾದ ಶಿಕ್ಷಣ ನೀಡಲು ಕ್ರೀಡಾಪಟುಗಳು, ಮಾಜಿ ಸೈನಿಕರು, ಪೋಲಿಸ್ ಅಧಿಕಾರಿಗಳು, ಎನ್‍ಸಿಸಿ ಸ್ವಯಂ ಸೇವಕರು, ಸ್ವಾಮೀಜಿಗಳ ಸಹಾಯ ಹಸ್ತ ಪಡೆಯಲು ನಿರ್ಧರಿಸಲಾಗಿದೆ. ಸೇನಾಪಡೆಗೆ ಸೇರ್ಪಡೆಯಾಗಲು ಯುವಕರಿಗೆ ಅಗತ್ಯವಾದ ಸಾಹಸ ಕಲೆ, ಕ್ರೀಡಾ ತರಬೇತಿ, ಕುಶಲಕಲೆ ತರಬೇತಿ, ವೃತ್ತಿ ಮಾರ್ಗದರ್ಶನ ನೀಡಲು ಆಯಾಯ ಕ್ಷೇತ್ರಗಳ ಸಾಧಕರನ್ನು ಕರೆಸಿ ಸೂಕ್ತ ಸಲಹೆ ಸಮಾಲೋಚನೆ ಮಾಡಿಸಲು ಯೋಜಿಸಲಾಗಿದೆ.
ಇದರ ಜೊತೆಗೆ ಅಧ್ಯಯನ ಸಾಮಗ್ರಿಗಳು, ದೈಹಿಕ ತರಬೇತಿ, ಒಳಾಂಗಣ ಶೂಟಿಂಗ್ ತರಬೇತಿ, ಜಿಮ್ ತರಬೇತಿ, ವಿವಿಧ ಅಡೆತಡೆಗಳನ್ನು ಹತ್ತುವ, ನೆಗೆಯುವ ತರಬೇತಿ,ಮಾನಸಿಕ ಸದೃಢತೆಗೆ ಯೋಗ-ಧ್ಯಾನ ಶಿಕ್ಷಣ, ವೈಯಕ್ತಿಕ ಗಮನ, ವ್ಯಕ್ತಿತ್ವ ವಿಕಸನ ಶಿಬಿರ, ಸಾಧಕರ ಸಲಹೆ ಮಾರ್ಗದರ್ಶನ,ಉತ್ತಮ ಶಿಕ್ಷಕರು,ಆಹಾರ ಮತ್ತು ವಸತಿಯ ಸೌಲಭ್ಯಗಳನ್ನು ಒದಗಿಸಲಾಗುವುದು.

ನೀವು ಯಾರನ್ನು ಸಂಪರ್ಕಿಸಬೇಕು ? :

ಈಗಾಗಲೇ ಪೂರ್ವ ಸಿದ್ಧತೆ ಆರಂಭವಾಗಿದ್ದು ಸೇನಾ ತರಬೇತಿ ಶಾಲೆ ಆವರಣದಲ್ಲಿ ದೈಹಿಕ ಕಸರತ್ತಿಗೆ ಬೇಕಾಗುವ ಸಲಕರಣೆಗಳನ್ನು, ತರಬೇತಿ ಪಡೆಯಲು ಹಾರುವ, ನೆಗೆಯುವ, ಹತ್ತುವ, ನುಸುಳುವ, ಜಾರುವ ತರಬೇತಿ ಕ್ರಿಯೆಗಳನ್ನು ನಡೆಸಲು ಬೇಕಾದ ಪರಿಕರಗಳನ್ನು ಅಳವಡಿಸುವ ಕಾರ್ಯ ಭರದಿಂದ ನಡೆದಿದೆ.

  • ಪೂರ್ವಸಿದ್ಧತೆಯಾಗಿ ರಾಷ್ಟ್ರೀಯ ಗುರಿಕಾರ್ತಿ (ಶೂಟರ್) ವಿದ್ಯಾಶ್ರೀ.ಬಿ.ಎಲ್ (ಮೊ.9108784177)
  • ಮಾಜಿ ಸೈನಿಕ ಸೂರ್ಯನಾರಾಯಣ್.ಎಂ.ಎಸ್ (ಮೊ.8431411186) ಹಾಗೂ
  • ಮಾಜಿ NCC ಕೆಡೆಟ್ ಸುಮಂತ್‍ಗೌಡ.ಹೆಚ್.ಎಂ (ಮೊ.9731154628)

ಅವರನ್ನು ನಿಯೋಜಿಸಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗೆ ಸದರಿಯವರ ಮೊಬೈಲ್‍ನ್ನು ಸಂಪರ್ಕಿಸುವುದು.

WhatsApp Image 2022 05 17 at 7.39.43 AM
ಶ್ರೀ ಅನುರಾಗ್ ಠಾಕೂರ್ ಮತ್ತು ಶ್ರೀ ಶಿವಮೂರ್ತಿ ಕೀಲಾರ

ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ಸಮಗ್ರ ದೃಷ್ಟಿಕೋನ ಇಟ್ಟುಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ನೀಡುವ ಹೊಸ ಪರಿಕಲ್ಪನೆ ನಮ್ಮದಾಗಿದೆ. ನಮ್ಮ ವಿಫಲತೆಗಳನ್ನು ಸರಿಪಡಿಸಿಕೊಂಡು ಕ್ರಮಬದ್ಧವಾಗಿ ಯುವಪೀಳಿಗೆಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಅನಂತ ಸೇನಾ ಪೂರ್ವ ತರಬೇತಿ ಅಕಾಡೆಮಿ ಹೊಸ ಹೆಜ್ಜೆ ಇಟ್ಟಿದೆ. ಯುವ ಶಕ್ತಿ ಹಾಗೂ ಅವರ ಪೋಷಕರ ಸಹಕಾರದೊಂದಿಗೆ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಯುವಕರ ಬಾಳಿಗೆ ಬೆಳಕಾಗುವುದು ಅನಂತ ಸೇನಾಪೂರ್ವ ತರಬೇತಿ ಅಕಾಡೆಮಿಯ ಆಶಯವಾಗಿದೆ.

ಶ್ರೀ ಶಿವಮೂರ್ತಿ ಕೀಲಾರ
ಅಧ್ಯಕ್ಷರು, ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್
ಪ್ರಧಾನ ಕಾರ್ಯದರ್ಶಿಗಳು, ಅಭಿನವ ಭಾರತಿ ಶಿಕ್ಷಣ ಟ್ರಸ್ಟ್(ರಿ) ಮಂಡ್ಯ. Abhinava Bharathi Educational Trust(R) Mandya.
Copyright © All rights reserved Newsnap | Newsever by AF themes.
error: Content is protected !!