December 2, 2021

Newsnap Kannada

The World at your finger tips!

ಪಾಕ್​ನ ಎಫ್​-16 ಹೊಡೆದುರುಳಿಸಿದ ಅಭಿನಂದನ್​ಗೆ ರಾಷ್ಟ್ರಪತಿಗಳಿಂದ ವೀರಚಕ್ರ ಪ್ರದಾನ

Spread the love

ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಶೌರ್ಯ ಪ್ರದರ್ಶನ ತೋರಿದ್ದ ಇಂಡಿಯನ್ ಏರ್​ಫೋರ್ಸ್​ನ ಈಗಿನ ಗ್ರೂಪ್​ ಕ್ಯಾಪ್ಟನ್ ಅಂದಿನ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ‘ವೀರ ಚಕ್ರ’ ಪುರಸ್ಕಾರ ಮಾಡಲಾಯಿತು.

ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನ್​ ಅವರಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಬಾಲಾಕೋಟ್‌ನ ಜೈಷ್​ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ಕೆಚ್ಚೆದೆಯ ವೈಮಾನಿಕ ದಾಳಿ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನದ ಯುದ್ಧ ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಹೊಡೆದುರುಳಿಸಿದ್ದರು.

ಜೊತೆಗೆ ಬಾಲಾಕೋಟ್‌ ದಾಳಿಯಲ್ಲಿ ಪಾಲ್ಗೊಂಡಿದ್ದ ವಾಯುಪಡೆಯ ಅಮಿತ್‌ ರಂಜನ್‌, ರಾಹುಲ್‌ ಬಸೋಯಾ, ಪಂಕಜ್‌ ಭುಜಾಡೆ, ಬಿಕೆಎನ್‌ ರೆಡ್ಡಿ, ಶಶಾಂಕ್‌ ಸಿಂಗ್‌ ಸೇರಿದಂತೆ ಐಎಎಫ್‌ನ 7 ಪೈಲಟ್‌ಗಳಿಗೆ ಕೂಡಾ’ವಾಯುಸೇನಾ’ ಪದಕ ಪ್ರಕಟಿಸಲಾಗಿದೆ.

ಪಾಕಿಸ್ತಾನದ ಎಫ್​-16 ಯುದ್ಧ ವಿಮಾನವನ್ನ ಹೊಡೆದುರುಳಿಸಿ, ನಂತರ ಶತ್ರುಗಳ ಕೈಗೆ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡಿದ್ದರು. ಭಾರತದ ಕಠಿಣ ನಿಲುವಿನ ಬಳಿಕ ಅವರು ಅವರು ತಾಯ್ನಾಡಿಗೆ ವಾಪಸ್​ ಆಗಿದ್ದರು. ಇತ್ತೀಚಿಗೆ ಅವರಿಗೆ ಭಾರತೀಯ ವಾಯು ಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಱಂಕ್​ಗೆ ಪ್ರಮೋಷನ್​ ನೀಡಲಾಗಿದೆ.

error: Content is protected !!