June 7, 2023

Newsnap Kannada

The World at your finger tips!

WhatsApp Image 2022 09 20 at 10.14.58 AM

ಅಶ್ಲೀಲ ವಿಡಿಯೋ ಲೀಕ್ ಮಾಡಿದ ವೈದ್ಯನನ್ನು ಹತ್ಯೆ ಮಾಡಿದ ಯುವತಿ, ಗೆಳೆಯರ ಬಂಧನ

Spread the love

ಗೆಳತಿಯಾಗಿ ಪರಿಚಯವಾಗಿ ಮದುವೆ ಹಂತಕ್ಕೆ ಯುವ ವೈದ್ಯನೊಬ್ಬ ತನ್ನ ಪ್ರಿಯತಮೆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ ಕಾರಣಕ್ಕಾಗಿ ಪ್ರಿಯತಮೆ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.

ವಿಕಾಸ್ ಮತ್ತು ಪ್ರತಿಭಾ ಡೇಟಿಂಗ್​ ಆ್ಯಪ್​​ ಮೂಲಕ ಪರಿಚವಾಗಿದ್ದಾರೆ. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿ ಬದಲಾಗಿತ್ತು. ಚೆನ್ನೈನಲ್ಲಿ ವೈದ್ಯನಾಗಿದ್ದ ಯುವಕ ಕೋರ್ಸ್ ಮಾಡಲು ಬೆಂಗಳೂರಿಗೆ ಬಂದಿದ್ದ. ಈ ವೇಳೆ ತಮ್ಮ ಮನೆಯವರ ಮುಂದೆ ವಿಕಾಸ್​ ಪ್ರೀತಿ ವಿಚಾರ ತಿಳಿಸಿದಾಗ ಇಬ್ಬರ ಮನೆಯವರೂ ಒಪ್ಪಿ ನಿಶ್ಚಿತಾರ್ಥವೂ ಆಗಿತ್ತು.

ನವೆಂಬರ್​ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದೆ. ಆದರೆ ಪ್ರಿಯಕರ ವಿಕಾಸ್ ಪ್ರತಿಭಾಳ ಖಾಸಗಿ ಪೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಖಾತೆ ತೆರೆದು ಅಪ್ ಲೋಡ್ ಮಾಡಿ ವಿಕೃತಿ ಮೆರೆದಿದ್ದವನ ವಿರುದ್ದ ಪ್ರಿಯತಮೆಯೆ ಹತ್ಯೆ ಮಾಡಿ ಸೇಡು ತೀರಿಸಿಕೊಂಡಿದ್ದಾಳೆ. ರಾಜ್ಯದಲ್ಲಿ 11133 ಗುತ್ತಿಗೆ ಪೌರ ಕಾರ್ಮಿಕ ಸೇವೆ ಕಾಯಂಗೆ ನಿರ್ಧಾರ

ವಿಕಾಸ್ ಹಾಗೂ ಪ್ರತಿಭಾ ಒಟ್ಟಿಗಿದ್ದರು. ಈ ವೇಳೆ ಪ್ರತಿಭಾಳ ಕೆಲ ನಗ್ನ ಫೋಟೋ ತೆಗ್ದಿದ್ದ ವಿಕಾಸ್ ವಿಕೃತಿ ಮೆರೆದಿದ್ದ ಎನ್ನಲಾಗಿದೆ. ಇದು ಪ್ರತಿಭಾ ಹಾಗೂ ಕುಟುಂಬಸ್ಥರಿಗೆ ಗೊತ್ತಾಗಿ ಗಲಾಟೆ ಮಾಡಿದ್ದಾರೆ. ಬಳಿಕ ಪ್ರತಿಭಾ ವಿಚಾರವನ್ನು ಗೆಳೆಯರ ಬಳಿ ಹೇಳಿಕೊಂಡಾಗ ಕೆರಳಿದ ಸ್ನೇಹಿತರು ಮಾತುಕತೆಗೆ ಸ್ನೇಹಿತನ ಮನೆಯಲ್ಲಿ ಸೇರಿದ್ದರು

ಆದ್ರೆ ಇಲ್ಲೂ ವಿಕಾಸ್, ಪ್ರತಿಭಾ ಬಗ್ಗೆ ಅಶ್ಲೀಲವಾಗಿ ಮಾತನ್ನಾಡಿದ್ನಂತೆ. ಇದರಿಂದ ಕೆಂಡವಾದ ಸ್ನೇಹಿತರು ವಿಕಾಸ್ ಮೇಲೆ ಅರ್ಧ ಗಂಟೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ವಿಕಾಸ್ ತಲೆಗೆ ಭಾರೀ ಪೆಟ್ಟು ಬಿದ್ದು ಕುಸಿದಿದ್ದಾನೆ. ಈ ವೇಳೆ ಸಾವನ್ನಪ್ಪಿದ್ದಾನೆಂದು ಕನ್​ಫರ್ಮ್​ ಮಾಡ್ಕೊಂಡು , ಅಲ್ಲೆ ಊಟ ಮಾಡಿದ್ದಾರೆ. ಆದರೆ ವಿಕಾಸ್​​​​​ ಜೀವಂತವಿರೋದು ಅರಿವಾಗ್ತಿದ್ದಂಗೆ, ಸೇಂಟ್​ ಜಾನ್ಸ್​ ಆಸ್ಪತ್ರೆಗೆ ಸೇರಿಸಿದ್ದಾರೆ ತಲೆಗೆ ಗಂಭೀರ ಗಾಯವಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ವಿಕಾಸ್ ಸಾವನ್ನಪ್ಪಿದ್ದಾನೆ.

ಪ್ರಿಯತಮೆ ಪ್ರತಿಭಾ ಹಾಗೂ ಆಕೆಯ ಸ್ನೇಹಿತರಾದ ಸುಶೀಲ್, ಗೌತಮ್​ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಮತ್ತೊರ್ವ ಆರೋಪಿ ಸೂರ್ಯನಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

error: Content is protected !!