January 11, 2025

Newsnap Kannada

The World at your finger tips!

sucide

ಮೊಬೈಲ್​ ಕೆಟ್ಟು ಹೋಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

Spread the love

ಮೊಬೈಲ್ ಕೆಟ್ಟು ಹೋಗಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಜಿಲ್ಲೆಯ ಯರಗನಹಳ್ಳಿಯ ಜನತಾ ಕಾಲೋನಿಯಲ್ಲಿ ಜರುಗಿದೆ, ಮಹೇಂದ್ರ( 22) ನೇಣಿಗೆ ಶರಣಾದ ಯುವಕ.

ಇತ್ತೀಚಿಗೆ ಮೃತ ಯುವಕನ ಮೊಬೈಲ್​ ನೀರಿಗೆ ಬಿದ್ದು ಕೆಟ್ಟು ಹೋಗಿತ್ತು. ಅದನ್ನು ರಿಪೇರಿ ಮಾಡಿಸಲು ಆತನ ಬಳಿ ಹಣ ಇರಲಿಲ್ಲ ಎನ್ನಲಾಗಿದ್ದು ಇದರಿಂದ ಬೇಸತ್ತು ಯುವಕ ನೇಣಿಗೆ ಕೊರಳೊಡ್ಡಿದ್ದಾನೆ ಎನ್ನಲಾಗಿದೆ.

ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೊಬೈಲ್ ಗೇಮ್ಸ್‌‌ಗಳಿಗೆ ತುಂಬಾ ಅಡಿಟ್ ಆಗಿದ್ದ ಎನ್ನಲಾಗಿದೆ.

ಈ ಮೊದಲು ಸಾಲ ಮಾಡಿಕೊಂಡು ಆರ್ಥಿಕ ಸಮಸ್ಯೆಯಲ್ಲಿದ್ದ ಯುವಕನಿಗೆ ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದ.

ತನ್ನ ಮನೆಯ ಪಕ್ಕದಲ್ಲೇ ಇರುವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕುರಿತು ಮೈಸೂರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!