ಬಾಹ್ಯಾಕಾಶಕ್ಕೆ ಹಾರಲಿದ್ದಾಳೆ ಗುಂಟೂರಿನ ಮಹಿಳೆ

Team Newsnap
1 Min Read

ಭಾರತೀಯ ಮೂಲದ ಅಮೆರಿಕಾ ನಿವಾಸಿ ಸಿರಿಶಾ ಬಾಂಡ್ಲಾ, ವರ್ಜಿನ್ ಗ್ಯಾಲಕ್ಟಿಕ್​ನ ಬಿಲಿಯನೇರ್ ಫೌಂಡರ್ ರಿಚರ್ಡ್ ಬ್ರಾನ್​ಸನ್ ಹಾಗೂ ಇತರೆ ನಾಲ್ವರ ಜೊತೆಯಲ್ಲಿ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿ ನಿಂತಿದ್ದಾಳೆ.

ಜುಲೈ 11 ರಂದು ಅಮೆಜಾನ್ ಫೌಂಡರ್ ಜೆಫ್ ಬೆಜೋಸ್ ಅವರ ಟ್ರಿಪ್ ಟು ಸ್ಟೇಸ್ ಮಿಷನ್​ನಲ್ಲಿ ಆಂಧ್ರಪ್ರದೇಶ ಗುಂಟೂರಿನಲ್ಲಿ ಹುಟ್ಟಿ ಬೆಳೆದ ಸಿರಿಶಾ ಬಾಂಡ್ಲಾ ಕೂಡ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಕ್ಕೆ ಹಾರುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಯೂ ಸಹ ಸಿರಿಶಾ ಬಾಂಡ್ಲಾ ಅವರದ್ದಾಗಿದೆ.ಬಾಹ್ಯಾಕಾಶಕ್ಕೆ ಹಾರಿದ ಭಾರತದ 4ನೇ ವ್ಯಕ್ತಿ ಎಂಬ ಹೆಗ್ಗಳಿಕೆಯ ಸಿರಿಶಾ ಅವರದ್ದಾಗಲಿದೆ.

ಬಾಂಡ್ಲಾ ಈ ಟೀಮ್​ನಲ್ಲಿ ರಿಸರ್ಚರ್ ಎಕ್ಸ್​ಪೀರಿಯನ್ಸ್ ಆಗಿ ಕಾರ್ಯನಿರ್ವಸಹಿಸಲಿದ್ದಾರೆ. 34 ವರ್ಷದ ಸಿರಿಶಾ, ಪುರ್ಡ್ಯೂ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ ಇಂಜಿನಿಯರ್ ಆಗಿ ಪದವಿ ಪಡೆದಿದ್ದಾರೆ.

ಸಿರಿಶಾ ತಂದೆ ಮುರಳೀಧರ್ ಬಾಂಡ್ಲಾ ಕೃಷಿ ವಿಜ್ಞಾನಿ. ಹಲವು ವರ್ಷಗಳ ಹಿಂದೆ ಹೆಚ್ಚಿನ ಅವಕಾಶಗಳನ್ನು ಅರಸಿ ಯುನೈಟೆಡ್ ಸ್ಟೇಟ್ಸ್​ಗೆ ವಲಸೆ ತೆರಳಿದ್ದರು. ಇದೀಗ ಮುರಳೀಧರ್ ಬಾಂಡ್ಲಾ ಅಮೆರಿಕಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

Share This Article
Leave a comment