KRS ಸುತ್ತ ಮುತ್ತ ಟ್ರಯಲ್ ಬ್ಲಾಸ್ಟ್ ಗೆ ತಾತ್ಕಾಲಿಕ ಬ್ರೇಕ್ : ರೈತರ ಒತ್ತಡಕ್ಕೆ ಮಣಿದ ಮಂಡ್ಯ ಡಿಸಿ – ಬ್ಲಾಸ್ಟ್ ಗೆ ರಾಜಮನೆತನವೂ ವಿರೋಧ

Team Newsnap
1 Min Read

ಕೊನೆಗೂ ರೈತರ ಒತ್ತಡಕ್ಕೆ ಮಣಿದು KRS ಸುತ್ತ ಮುತ್ತ ನಡೆಸಲು ಆರಂಭಿಸಿದ್ದ ಟ್ರಯಲ್ ಬ್ಲಾಸ್ಟ್ ಅನ್ನು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಮುಂದೂಡಿದ್ದಾರೆ. ಈ ನಡುವೆ ಮೈಸೂರಿನ ರಾಜಮನೆತನವೂ ಕೂಡ
ಬ್ಲಾಸ್ಟ್ ಗೆ ವಿರೋಧ ವ್ಯಕ್ತಪಡಿಸಿ ಪ್ರಮೋದದೇವಿ ಪತ್ರ ಬರೆದಿದ್ದಾರೆ.

ನಿನ್ನೆಯಿಂದ ಯಾವುದೇ ವಿರೋಧವನ್ನು ಲೆಕ್ಕಿಸದೇ ಬ್ಲಾಸ್ಟ್ ಆರಂಭಿಸಿದ ನಂತರ ರೈತರು ಕಳೆದ ರಾತ್ರಿ ಪೂರ್ಣ ಡಿಸಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ, ಕಾಂತ್ರಿ ಗೀತೆ ಹಾಡಿ ಪ್ರತಿಭಟನೆ ನಡೆಸಿದರು.

ಸೋಮವಾರದ ವಿದ್ಯಮಾನ :

ತೀವ್ರ ವಿರೋಧದ ನಡುವೆಯೂ ಕೆಆರ್‌ಎಸ್‌ ಜಲಾಶಯದ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ ಗೆ ಆರಂಭವಾಗಿದೆ.

ಪಾಂಡವಪುರದ ಬೇಬಿ ಬೆಟ್ಟದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲು ಪರಿಶೀಲನೆಗೆ ಬಂದ ವೇಳೆ ತಜ್ಞರ ವಿರುದ್ಧ ರೈತರು ಪರ, ವಿರೋಧ ಪ್ರತಿಭಟನೆಗಳು ತಾರಕಕ್ಕೇರಿದೆ.

ಬ್ಲಾಸ್ಟಿಂಗ್ ವಿರುದ್ಧ ರೈತರ ಸಂಘದ ಕಾರ್ಯಕರ್ತರು ಬೈಕ್ ರ್ಯಾಲಿಯನ್ನೂ ನಡೆಸಿದರು. ಇದನ್ನು ಕಾವೇರಿಪುರದ ಬಳಿ ಪೊಲೀಸರು ತಡೆದರು. ಈ ವೇಳೆ ವಾಕ್ಸಮರ ನಡೀತು. ಇದೇ ಹೊತ್ತಲ್ಲಿ ಕಾವೇರಿಪುರ ಗ್ರಾಮಸ್ಥರು ನಮಗೆ ಗಣಿಗಾರಿಕೆ ಬೇಕು, ಟ್ರಯಲ್ ಬ್ಲಾಸ್ಟ್ ಮಾಡಿ ಎಂದು ಆಗ್ರಹಿಸಿದರು. ಎರಡು ಗುಂಪುಗಳ ಮಧ್ಯೆ ಜಟಾಪಟಿ ನಡೀತು. ಕೊನೆಗೆ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದರು.

ರಾಜ್ಯದ 21 ನಿಗಮ – ಮಂಡಳಿಗೆ ಅಧ್ಯಕ್ಷರ ನೇಮಕ: ಸರ್ಕಾರದ ಆದೇಶ

ಡಿಸಿ ನಡೆಸಿದ ಓಲೈಕೆ ಯತ್ನವೂ ವಿಫಲವಾಗಿದೆ, ರೈತರು ಡಿಸಿ ಕಚೇರಿಯಲ್ಲಿಯೇ ಧರಣಿ ಕುಳಿತಿದ್ದಾರೆ.

ರಾಜಮಾತೆ ವಿರೋಧ :

ಈ ಮಧ್ಯೆ ಮೈಸೂರಿನ ರಾಜಮನೆತನವೂ ಟ್ರಯಲ್ ಬ್ಲಾಸ್ಟಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಂಡ್ಯ ಡಿಸಿಗೆ ಪತ್ರ ಬರೆದಿದೆ. ನಮ್ಮ ಅನುಮತಿ ಪಡೆಯದೇ ಟ್ರಯಲ್ ಬ್ಲಾಸ್ಟ್ ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಪ್ರಮೋದಾದೇವಿ ತರಾಟೆ ತೆಗೆದಿದ್ದಾರೆ. ಕೂಡಲೇ ಅನುಮತಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a comment