ನ್ಯೂರಾಲಿಂಕ್ (Neuralink) ಕಂಪನಿ ಮಾನವರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ (Chip) ಅನ್ನು ಶೀಘ್ರವೇ ಪರೀಕ್ಷಿಸಲಿದೆ ಎಂದು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ತಿಳಿಸಿದ್ದಾರೆ.
ಮಸ್ಕ್‌ನ ಸ್ಟಾರ್ಟ್ಅಪ್ ನ್ಯೂರಾಲಿಂಕ್ ನಿರ್ಮಿಸಿರುವ ಈ ಚಿಪ್ ಮನುಷ್ಯನಿಗೆ ಅಳವಡಿಸಲಾದಲ್ಲಿ ಆತ ತನ್ನ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್‌ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಮಸ್ಕ್ ಹೇಳಿದ್ದಾರೆ. 123 ಸ್ಥಾನ ಪಡೆದು JDS ಅಧಿಕಾರಕ್ಕೆ ಬಂದರೆ ದಲಿತ ಸಿಎಂ ಮಾಡಲು ನಾವು ಸಿದ್ಧ – ಹೆಚ್‌ಡಿಕೆ
ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಒಂದು ವೇಳೆ ಯಶಸ್ವಿಯಾದರೆ, ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಸ್ನಾಯುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರದ ವ್ಯಕ್ತಿಗಳೂ ಸಕ್ರಿಯರಾಗುತ್ತಾರೆ. ಮಾನವನ ಬೆನ್ನುಹುರಿ ತುಂಡಾಗಿದ್ದರೂ ಆತನ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಿಸುವ ಸಾಮರ್ಥ್ಯ ಇದೆ. ಆ ವ್ಯಕ್ತಿ ಮೆದುಳಿನಿಂದಲೇ ಯಂತ್ರಗಳ ಜೊತೆ ಸಂವಹಿಸಬಹುದು ಎಂದು ವರದಿಗಳು ತಿಳಿಸಿವೆ.
2019ರ ಜುಲೈನಲ್ಲಿ ನ್ಯೂರಾಲಿಂಕ್ 2020ರಲ್ಲಿಯೇ ಮಾನವರ ಮೇಲೆ ಈ ಚಿಪ್‌ನ ಮೊದಲ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಈಗಾಗಲೇ ಈ ನಾಣ್ಯದ ಗಾತ್ರದ ಚಿಪ್‌ಗಳನ್ನು ಪ್ರಾಣಿಗಳ ತಲೆಬುರುಡೆಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ.
ಈ ಚಿಪ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಎಫ್‌ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಿದ್ದೇವೆ. ಅಲ್ಲಿಂದ ಅನುಮತಿ ಪಡೆದರೆ, ಇನ್ನು ಕೇವಲ 6 ತಿಂಗಳುಗಳಲ್ಲಿ ನಾವು ಮಾನವರಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಸಲು ಸಾಧ್ಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ