ಓದುಗರೊಬ್ಬರ ಅಭಿಪ್ರಾಯ :
ರಾಜ್ಯ ಬಿಜೆಪಿಗೆ ಹಾಗೂ ಆ ಪಕ್ಷದ ನಾಯಕರುಗಳು ತಾವುಗಳೇ ಮಾಡಿಕೊಂಡ ತಪ್ಪು ನಿರ್ಧಾರಗಳು ಮತ್ತು ಭ್ರಷ್ಟ ವ್ಯವಸ್ಥೆಗೆ ಕುಮ್ಮಕ್ಕು ನೀಡಿದ ಕಾರಣಕ್ಕಾಗಿ ಈಗಲಾದರೂ ಪಾಠ ಕಲಿಯಬೇಕಿದೆ. ಈ ಬಾರಿ ಚುನವಣೆಯಲ್ಲಿ ಬಹುಮತ ಬಂದರೂ ಸರಿ, ಬರದೇ ಇದ್ದರೂ ಸರಿ , ತಪ್ಪುಗಳನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು ಸರಿ.
ನಾಳೆ ನಿಮ್ಮ ಭವಿಷ್ಯ ನಿರ್ಧಾರವಾಗಲಿದೆ.ಮೋದಿಯವರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯಕ್ಕೆ ನಿಮ್ಮಿಂದ ಶುದ್ಧ ಹಾಗೂ ದಕ್ಷ ಆಡಳಿತವನ್ನು ನಿರೀಕ್ಷಿಸಿದ್ದ ಲಕ್ಷಾಂತರ ಕನ್ನಡಿಗರು ಮಾತ್ರ ಬಿಜೆಪಿ ಆಡಳಿತ ಅವ್ಯವಸ್ಥೆಯಿಂದ ಭ್ರಮನಿರಸನಗೊಂಡಿರುವುದು ಮಾತ್ರ ದಿಟ.
- ನಿಮ್ಮ ಆಡಳಿತದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತೃಣ ಮಾತ್ರವೂ ಕಡಿಮೆ ಆಗಲಿಲ್ಲ. ಅಧಿಕಾರಿಗಳು ವಸೂಲಿಮಾಡುತ್ತಿದ್ದ ಲಂಚದ ಪ್ರಮಾಣ ಇನ್ನೂ ಹೆಚ್ಚಾಯಿತು. ಇದೇ ಕಾರಣದಿಂದ ಅತ್ಯಂತ ಭ್ರಷ್ಟ ಕಾಂಗ್ರೆಸ್ ನವರು ನಿಮ್ಮನ್ನು 40 % ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದಾಗ ಜನರು ಇದನ್ನು ನಂಬಿದರು.
- ನೀವು ಅಧಿಕಾರದಲ್ಲಿದ್ದರೂ ಸಹ, ನಿಮ್ಮನ್ನು ನಿತ್ಯವೂ ಕೀಳು ಭಾಷೆಯಲ್ಲಿ ನಿಂದಿಸುತ್ತಿದ್ದ ಸಿದ್ದರಾಮಯ್ಯನ ಅಥವಾ ಡಿಕೆಶಿ ವಿರುದ್ಧ ಒಂದೇ ಒಂದು ಭ್ರಷ್ಟಾರದ ಹಗರಣವನ್ನು ಬಯಲಿಗೆಲಳೆಯಲಿಲ್ಲ. ನಿಮ್ಮ ಈ ನಿಷ್ಕ್ರಿಯತೆಯಿಂದ ಕಾಂಗ್ರೆಸ್ ನವರಿಗೆ ಲಾಭವಾಯಿತು. ಆ ವ್ಯಕ್ತಿಗಳ ಹೇಳಿಕೆ, ಸಮಾಜ ಒಡೆಯುವ ಹಾಗೂ ಮೋದಿ ಯವರ ಮೇಲಿನ ದ್ವೇಷದ ಮಾತುಗಳಿಂದ ನಮಗೆ ರೋಷ ಬರುತ್ತಿತ್ತು. ಆದರೆ ಅಧಿಕಾರದ ಫಲ ಅನುಭವಿಸುತ್ತಿದ್ದ ನೀವು ಪರಿಣಾಮಕಾರಿಯಾಗಿ ಸಿದ್ದರಾಮಯ್ಯನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲೇ ಇಲ್ಲ!
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಲ್ಲಿ ಯಾವ ಸುಧಾರಣೆಯೂ ಆಗಲಿಲ್ಲ. ನಿಷ್ಕ್ರಿಯ ಪೊಲೀಸರ ಎದುರು ಅಟ್ಟಹಾಸದಿಂದ ಮೆರೆಯುವ ಕ್ರಿಮಿನಲ್ ಗಳು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನೇ ಹಾಡು ಹಗಲು ಕೊಚ್ಚಿ ಹಾಕಿದರು. ಕರೋನ ಕಾಲದಲ್ಲಿ ಪೊಲೀಸರನ್ನು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಹೊಡೆದರು. ನೀವು “ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿಕೆ ಕೊಟ್ಟಿರಿ ಅಷ್ಟೇ ಯಾವುದೇ ಕ್ರಮ ಆಗಲಿಲ್ಲ
- ನಿಮ್ಮ ಪಕ್ಷ ಹಾಗೂ ಮಂತ್ರಿಮಂಡಲದಲ್ಲಿ ಒಗ್ಗಟ್ಟು ಹಾಗೂ ಸಮನ್ವಯತೆಯೇ ಇಲ್ಲ, ಭ್ರಷ್ಟ ಸಚಿವರ ಸಂಖ್ಯೆ ಹೆಚ್ಚಿತ್ತು. ಕಾಂಗ್ರೆಸ್ ನಿಂದ ನೀವು ಖರೀದಿ ಮಾಡಿದ ಒಬ್ಬ ಶಾಸಕನಿಗೂ
ಚಾರಿತ್ರ್ಯ ವಿರಲಿಲ್ಲ. ಎಲ್ಲರೂ ಭ್ರಹ್ಮಾಂಡ ಭ್ರಷ್ಟಚಾರ ಮಾಡಿದ್ದು ಕಂಡರೂ ಕಾಣದಂತೆ ಆ ಮಾಹಾಶಯರನ್ನೇ ಬೆಂಬಲಿಸಿ ಬಿಜೆಪಿ ಹಾಗೂ ಮೋದಿಗೆ ಕಳಂಕ ತಂದಿದ್ದು ರಾಜ್ಯ ಬಿಜೆಪಿ ನಾಯಕರು - ಕಾಂಗ್ರೆಸ್ ನಲ್ಲಿ ಆ ಪಪ್ಪು (ರಾಗಾ) ಅಥವಾ ಸಿದ್ದರಾಮಯ್ಯ, ಡಿಕೆಶಿ ಸುಳ್ಳಿನ ಹಾಗೂ ದ್ವೇಷಪೂರಿತ ಹೇಳಿಕೆಯನ್ನು ಕೊಟ್ಟರೆ ಆ ಪಕ್ಷದವರೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸುತ್ತಾರೆ. ಆದರೆ ನಿಮ್ಮಲ್ಲಿ ಯಾರನ್ನು ಯಾರೂ ಬೆಂಬಲಿಸುವುದಿಲ್ಲ. ಬಿಜೆಪಿ ಪಕ್ಷದ ಮುಂಚೂಣಿಯಲ್ಲಿರುವ ನಾಯಕರೆನನಿಸಿಕೊಂಡಿರುವವರು ಉಡಾಫೆಯ ಹೇಳಿಕೆಗಳು ಹಾಗೂ ವೈಯಯಕ್ತಿಕ ನಿಂದನೆಗಳಲ್ಲಿ ನಿಸ್ಸೀಮರು. ನೀವು ಬರೀ ಲಾಭಾಕಾಂಕ್ಷಿಗಳು.
- ವಿರೋದ ಪಕ್ಷದ 40% ಕಮಿಷನ್, ನಂದಿನಿ – ಅಮೂಲ್ ಹಾಲಿನ ಸಂಬಂಧ ದುರ್ಬಲಗೊಳಿಸುವುದು… ಇತ್ಯಾದಿ ಆರೋಪಗಳಿಗೆ ಪರಿಣಾಮಕಾರಿಯಾಗಿ ಜವಾಬು ನೀಡಿ ಬಾಯಿ ಮುಚ್ಚಿಸಲು ಮೋದಿಯವರೇ ಬರಬೇಕಾಯಿತು. ನೀವು “ಮಾನ ನಷ್ಟ ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದೇವೆ” ಎಂದು ಹೇಳಿಕೆ ಕೊಟ್ಟಿರಿ ಅಷ್ಟೇ.
- ಸಿದ್ರಾಮಯ್ಯ ಆಡಳಿತದ ಭ್ರಷ್ಟಾಚಾರ ಹಗರಣಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಮೂಲೆಗುಂಪು ಮಾಡಿ ಜನಗಳನ್ನು ವಂಚಿಸಿದ್ದನ್ನು ನೀವು ಚುನಾವಣಾ ಸಮಯದಲ್ಲೂ ಜೋರಾಗಿ ಹೇಳಲೇ ಇಲ್ಲ. ನಕಲಿ ಪಡಿತರ ಚೀಟಿ ಹಾಗೂ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನೂರಾರು ಕೋಟಿ ನುಂಗಿದ್ದನ್ನು ಮೋದಿಯವರೇ ಹೇಳಬೇಕಾಯಿತು. ಅತ್ಯಂತ ಜವಾಬ್ದಾರಿಗಳ ಮಧ್ಯೆಯೂ ಮೋಡಿಯವರು ಪ್ರಚಾರಕ್ಕೆ ಬಂದು ಉತ್ಸಾಹ ಹಾಗೂ ಶಕ್ತಿ ತುಂಬಿ ಮತದಾರರನ್ನು ಪ್ರಭಾವಿಸಬೇಕಾಯಿತು!
- ಸಿದ್ದರಾಮಯ್ಯನ “ಲಿಂಗಾಯಿತ ಮುಖ್ಯಮಂತ್ರಿಗಳು ಭ್ರಷ್ಟರು” ಹೇಳಿಕೆಯನ್ನು (ಇದು ಬಾಗಶಃ ಸತ್ಯ ಬಿಎಸ್ ವೈ ಮತ್ತು ಬೊಮ್ಮಾಯಿಯವರದ್ದು ಮಾತ್ರ ಭ್ರಷ್ಟ ಆಡಳಿತ) ಚುನಾವಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ.
ನೀವು ಅಧಿಕಾರವನ್ನು ಸುಲಭವಾಗಿ ಗಳಿಸಿ ಜವಾಬ್ದಾರಿ ರಹಿತವಾಗಿ ಅನುಭವಿಸಬಹುದೆಂದು ಭಾವಿಸಿದ್ದೀರಿ. ಇದು ಕಾಂಗ್ರೆಸ್ ಮನೋಭಾವ. ದಯವಿಟ್ಟು ನೆನಪಿಡಿ There is no free lunch.
ನಿಮ್ಮ ಈ ನಡತೆಗಳು ರಾಷ್ಟ್ರಪ್ರೇಮಿ, ಪ್ರಾಮಾಣಿಕ, ಪರಿಶ್ರಮ ಹಾಗೂ ಬಲಿಷ್ಟ ವಿಶ್ವ ನಾಯಕ ಮೋದಿ ಯವರಿಗೆ ನೀವು ಮಾಡುವ ಅವಮಾನ. ನಿಮಗೆ ನಾಚಿಕೆ ಆಗಬೇಕು. ನಿಮ್ಮ ಎಲ್ಲಾ ವೈಫಲ್ಯಗಳನ್ನು ಬದಿಗಿಟ್ಟು ಪ್ರಧಾನಿ ಮೋದಿಯವರು ನಿಮಗಾಗಿ ಮತದಾರರಲ್ಲಿ ವಿನಂತಿಸಿದ್ದಾರೆ ಅವರ ಮೇಲಿನ ವಿಶ್ವಾಸ ಹಾಗೂ ಪ್ರೀತಿಯಿಂದ ನಾವು ಮತ ಹಾಕಿದ್ದೇವೆ.ಷರತ್ತು ಒಪ್ಪಿದರೆ ಮೈತ್ರಿಗೆ ಸಿದ್ಧ – ಎಚ್ ಡಿ ಕೆ ಸಂದೇಶ ರವಾನೆ
ಬಹುಮತ ಬಂದರೆ ಹೊಂದಾಣಿಕೆ ರಾಜಕೀಯದ ಹಾಗೂ ನಿಷ್ಕ್ರಿಯ ಹಿರಿಯರನ್ನು ಪಕ್ಕಕ್ಕೆ ತಳ್ಳಿ. ದಕ್ಷ, ಪ್ರಾಮಾಣಿಕ ಹಾಗೂ ಧೈರ್ಯವಂತರಿಗೆ ಮಂತ್ರಿಗಿರಿ ಕೊಡಿ. ನಾವು ನಿಮ್ಮಿಂದ ನಿರೀಕ್ಷಿಸುವುದು ಉತ್ತರ ಪ್ರದೇಶದ ಯೋಗಿ, ಅಸ್ಸಾಂನ ಹಿಮಾಂತ ಮಾದರಿ ಆಡಳಿತ ಹಾಗೂ ಅಣ್ಣಾಮಲೈರಂತಹ ರಾಜ್ಯಾಧ್ಯಕ್ಷರು. ಇದು ಸಾಧ್ಯ – ಆ ರಾಜ್ಯಗಳಿಗೂ ನಮಗೂ ಒಂದೇ ಸಂವಿಧಾನ ತಾನೇ? ಇದು ಅಸಾಧ್ಯವಲ್ಲ.
ಮೋದಿಯವರಿಗೆ,ಬಿಜೆಪಿಯ ಕಾರ್ಯಕರ್ತರಿಗೆ ಹಾಗೂ ಕರ್ನಾಟಕದ ಜನತೆಗೆ ದ್ರೋಹ ಮಾಡಬೇಡಿ – ಫಲಿತಾಂಶ ಬಂದ ನಂತರವೂ ಆತ್ಮಾವಲೋಕನ ಮಾಡಿಕೊಳ್ಳಬಹುದು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ