ಮಹದೇಪುರ ಆನಂದಾಳ್ವಾರ್ ಪ್ರೌಢಶಾಲೆಯಲ್ಲಿ ಶೇಕಡ ನೂರಷ್ಟು ಫಲಿತಾಂಶ

Team Newsnap
1 Min Read
100 percent result in Mahadepur Anandalwar High School ಮಹದೇಪುರ ಆನಂದಾಳ್ವಾರ್ ಪ್ರೌಢಶಾಲೆಯಲ್ಲಿ ಶೇಕಡ ನೂರಷ್ಟು ಫಲಿತಾಂಶ

ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿರುವ ಎಂ ಕೆ ಆನಂದಾಳ್ವಾರ್ ಪ್ರೌಢಶಾಲೆಯಲ್ಲಿ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ .

ಪರೀಕ್ಷೆ ಬರೆದಿದ್ದ 42 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ,27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ .

ಎಂಪಿ ಪ್ರೀತಂ ಎಂಬ ವಿದ್ಯಾರ್ಥಿ 616 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ಹತ್ತನೇ ಹತ್ತನೇ ರಾಂಕ್ ಗಳಿಸಿದ್ದಾರೆ
ಎಂದು ಸಂಸ್ಥೆಯ ಅಧ್ಯಕ್ಷ ಡಾ. ಗಿಣಿಸ್ವಾಮಿ ಅವರು ತಿಳಿಸಿದ್ದಾರೆ .

ಎಂಟು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನದಲ್ಲಿ ಒಬ್ಬ, ಹಿಂದಿಯಲ್ಲಿ ಇಬ್ಬರೂ ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿದ್ದಾರೆ.ಷರತ್ತು ಒಪ್ಪಿದರೆ ಮೈತ್ರಿಗೆ ಸಿದ್ಧ – ಎಚ್ ಡಿ ಕೆ ಸಂದೇಶ ರವಾನೆ

ಶಾಲಾ ಆಡಳಿತ ಮಂಡಳಿಯ ಖಜಾಂಚಿ ಎಂ.ಪಿ ಸ್ವಾಮಿಗೌಡ, ನಿರ್ದೇಶಕರಾದ ಕೆ ಪುಟ್ಟಸ್ವಾಮಿ, ಮುಖ್ಯ ಶಿಕ್ಷಕರಾದ ಮಾದೇಗೌಡ, ಶಿಕ್ಷಕರಾದ ಲೋಕೇಶ್ ಚಂದಗಾಲು,ಡಿ ಎಂ ಮಾದಯ್ಯ,ಕೆ ಎಲ್ ಶಿವಲಿಂಗಯ್ಯ , ನರಸಿಂಹನ್,ಪ್ರವೀಣ್, ಮುರ್ಪಾದ್ , ಸುಮಾ ಮತ್ತಿತರರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Share This Article
Leave a comment