ಶಾಲೆಯಲ್ಲಿ ಹೊಸ ಪ್ರಯೋಗ- ಕನ್ನಡ ಮಾಧ್ಯಮಕ್ಕೆ ಸೇರಿದರೆ ಬೆಳ್ಳಿ ಕಾಯಿನ್ ಗಿಪ್ಟ್

Team Newsnap
1 Min Read

ಕನ್ನಡ ಮಾಧ್ಯಮ ಶಾಲಾ ಪ್ರವೇಶ ಪಡೆಯುವ ಒಂದನೇ ತರಗತಿ ಮಕ್ಕಳಿಗೆ ಬೆಳ್ಳಿಯ ನಾಣ್ಯ ಕೊಡುವ ಜತೆಗೆ ಸರ್ಕಾರ ನೀಡುವ ಉಚಿತ ಕೊಡುಗೆಗಳನ್ನು ನೀಡಲಾಗುತ್ತಿದೆ.

ಎಲ್ಲ ಮಕ್ಕಳಿಗೂ ವರ್ಷಕ್ಕೆ ಆಗುವಷ್ಟು ಉಚಿತ ನೋಟ್​ ಪುಸ್ತಕಗಳು, ಶಾಲಾಬ್ಯಾಗ್​, ಲೇಖನ ಸಾಮಗ್ರಿ, ಜಾಮೆಟ್ರಿ, ಐಡೆಂಟಿಟಿ ಕಾರ್ಡ್​, ಬೆಲ್ಟ್, ಹಾಗೂ 5, 6, 7ನೇ ತರಗತಿಯವರಿಗೆ ಉಚಿತ ಶೈಕ್ಷಣಿಕ ಪ್ರವಾಸ, ಸುತ್ತಮುತ್ತಲ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ ನೀಡಲಾಗುತ್ತಿದೆ ಎಂದು ಪೋಸ್ಟರ್​ನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : ಬಿಜೆಪಿ ಮುಖಂಡ ಅನಂತರಾಜು ಹನಿಟ್ರ್ಯಾಪ್ ಗೆ ಬಲಿ – ರೇಖಾ, ಸ್ಪಂದನ , ವಿನೋದ್ ಸಾವಿಗೆ ಕಾರಣ?

ಇದು ಶತಮಾನದ ಇತಿಹಾಸವಿರುವ ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಹೆಸರಲ್ಲಿ ಪ್ರಕಟವಾಗಿರುವ ಪೋಸ್ಟರ್​.

ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಈ ಶಾಲೆ ವಿಭಿನ್ನವಾಗಿ ನಿಲ್ಲುತ್ತಿದೆ.

ಈ ಶಾಲೆಯಲ್ಲಿ ಆಂಗ್ಲಮಾಧ್ಯಮದ 1ರಿಂದ 3ನೇ ಹಾಗೂ ಕನ್ನಡ ಮಾಧ್ಯಮದ 1ರಿಂದ 7 ತರಗತಿಗಳಿಗೆ ಪ್ರವೇಶ ಆರಂಭವಾಗಿದ್ದು, ಮಕ್ಕಳ ಪ್ರವೇಶಕ್ಕಾಗಿ ಸಾಮಾಜಿಕ ಜಾಲತಾಣದ ಮೂಲಕ ಒಂದು ವಿಶೇಷ ಪೋಸ್ಟರ್​ ಹಂಚಿಕೊಳ್ಳಲಾಗಿದೆ.

ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಬರಲು ಪ್ರೇರೇಪಿಸಲಾಗುತ್ತಿದೆ.
ಈಗಾಗಲೇ ಶಾಲೆಯು ಉತ್ತಮವಾದ ಡೆಸ್ಕ್​ಗಳು, ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಮತ್ತು ಕ್ರೀಡಾ ಸಾಮಗ್ರಿ ಹೊಂದಿದೆ. ಏಳು ವರ್ಷಗಳಿಂದ ಅನಿವಾಸಿ ಭಾರತೀಯ ಡಾ.ರಾಮಕೃಷ್ಣ ಅವರ ಸಹಕಾರದಲ್ಲಿ ಹಳ್ಳಿಯಿಂದ ಬರುವ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಈ ಎಲ್ಲಾ ಪ್ರಯತ್ನಗಳಿಂದಾಗಿ 2012ರಲ್ಲಿ 32 ಮಕ್ಕಳೊಂದಿಗೆ ಮುಚ್ಚುವ ಹಂತದಲ್ಲಿದ್ದ ಶಾಲೆ ಇದೀಗ 110 ಮಕ್ಕಳ ಕಲಿಯುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕರು.

ಈ ವರ್ಷದಿಂದ ಸ್ಮಾರ್ಟ್​ ಕ್ಲಾಸ್​ ಮತ್ತು ಕಂಪ್ಯೂಟರ್​ ತರಗತಿಗಳು ಆರಂಭವಾಗಲಿದೆ. ಇಬ್ಬರು ಆಂಗ್ಲ ವಿಷಯ ತಜ್ಞರು ಸ್ಪೋಕನ್​ ಇಂಗ್ಲಿಷ್​ ತರಬೇತಿ ನೀಡಲಿದ್ದಾರೆ. ನಿಮ್ಮ ಮಕ್ಕಳನ್ನು ಯಾವುದೇ ಖರ್ಚಿಲ್ಲದೆ ಶತಮಾನದ ಶಾಲೆಗೆ ಸೇರಿಸಿ ಎಂದು ಎಸ್​ಡಿಎಂಸಿ ಅಧ್ಯಕ್ಷ ದೇವರಾಜು ಮನವಿ ಮಾಡಿದ್ದಾರೆ.

Share This Article
Leave a comment