March 10, 2026

Newsnap Kannada

The World at your finger tips!

well

ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

Spread the love

ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ರಾಮ್‍ಸರ ನಲ್ಲಿ ನಡೆದಿದೆ.

ಮೃತ ತಾಯಿ ಮತ್ತು ಮಕ್ಕಳು ರಾಮ್ಸರ್ ಗ್ರಾಮದ ನಿವಾಸಿಗಳು. ವಿಮ್ಲಾ(30) ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ತಾಯಿ ಮತ್ತು ಮೂವರು ಮಕ್ಕಳ ಶವವನ್ನು ಈ ಬೆಳಗ್ಗೆ ಬಾವಿಯಿಂದ ಹೊರತೆಗೆಯಲಾಗಿದೆ. ಮರಣೊತ್ತರ ಪರೀಕ್ಷೆಯ ನಂತರ ಪೊಲೀಸರು ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

12 ವರ್ಷ ಗಂಡನೊಂದಿಗೆ ಸಂಸಾರ ಮಾಡಿದ್ದ ಮಹಿಳೆ ಮೂವರು ಮಕ್ಕಳಿದ್ದಾರೆ. ಪತಿ-ಪತ್ನಿ ಚೆನ್ನಾಗಿದ್ದರೂ ತಾಯಿ ಮತ್ತು ಮೂರು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಇನ್ನೂ ನಿರ್ದಿಷ್ಟವಾಗಿ ಗೊತ್ತಾಗಿಲ್ಲ.

error: Content is protected !!