ಸನ್ಯಾಸಿ ಸಾಮ್ರಾಜ್ಯ ಕಟ್ಟಬಲ್ಲ

Team Newsnap
3 Min Read

ಮಾನವನ ಇತಿಹಾಸದ ಹೆಜ್ಜೆಗಳನ್ನು ಇಣುಕಿ ನೋಡಿದಾಗ ಮನುಷ್ಯನ ವಿಚಾರಧಾರೆಯಷ್ಟು ಶಕ್ತಿಶಾಲಿ, ಅಣುಬಾಂಬು ಕೂಡ ಅಲ್ಲ. ಬೃಹದಾಕಾರವಾಗಿ ಬೆಳೆದು ನಿಂತ ವ್ಯಕ್ತಿಯಿರಲಿ, ವ್ಯಕ್ತಿತ್ವವಿರಲಿ, ಸಾಮ್ರಾಜ್ಯವೇ ಇರಲಿ, ಅವುಗಳ ಹಿಂದೆ ಸರಳವಾದ ವಿಚಾರಧಾರೆಯ ಬುನಾದಿ ಇರುತ್ತದೆಂಬುದು ಕಡೆಗಣಿಸುವಂತಿಲ್ಲ.

ಬೀದಿ ಬೀದಿಗಳಲ್ಲಿ ಮುತ್ತುರತ್ನಗಳ ವ್ಯಾಪಾರದಿಂದ ವಿಜಯನಗರ ಸಾಮ್ರಾಜ್ಯದ ಅಗಾಧತೆಯ ಹಿಂದೆ ವಿದ್ಯಾರಣ್ಯರೆಂಬ ಸರಳ ಶಕ್ತಿಯ ಪ್ರೇರಣೆ ಇದೆ ಎನ್ನುವುದು ಜಗಜ್ಜಾಹೀರು. ಹೀಗೆ ಆಗಾದವಾದವುಗಳ ಹಿಂದೆ ಸರಳ ಸನ್ಯಾಸಿಗಳ ಪ್ರೇರಣೆಯಿದೆ ಎನ್ನುವುದಕ್ಕೆ ಸ್ವಾಮಿ ವಿವೇಕಾನಂದರ ಈ ಘಟನೆ ತಮ್ಮ ಮುಂದೆ.

ಭಾರತದಿಂದ ಅಮೆರಿಕ ಚಿಕಾಗೋ ಭಾಷಣಕ್ಕೆ ಸಮುದ್ರಮಾರ್ಗವಾಗಿ ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ವಿವೇಕಾನಂದರು ಆಕಸ್ಮಿಕವಾಗಿ ಜೆಮ್ ಶೆಡ್ ಜಿ ಟಾಟಾರವರನ್ನು ಭೇಟಿಯಾದರು. ಬೃಹತ್ ‘ಶ್ರೀಮಂತ ಉದ್ಯಮಿ’ ಯಾದ ಜೆಮ್ ಶೆಡ್ ಜಿ ಟಾಟಾರವರಿಗೆ ಕುತೂಹಲಕ್ಕಾಗಿ ವಿವೇಕಾನಂದರು ಎಲ್ಲಿಗೆ ಹೊರಟಿರುವೆ ಎಂದು ಕೇಳಿದರು. ಮರು ಮಾತಿಗೆ ಟಾಟಾರವರು ಹೇಳಿದರು, ಭಾರತದ ವಿವಿಧ ಭಾಗಗಳಿಂದ ಸಂಗಹಿಸಿದ ಮಣ್ಣಿನ ಮಾದರಿಯಲ್ಲಿ ಕಬ್ಬಿಣದ ಅಂಶವಿದೆಯೇ ಎಂದು ಪರೀಕ್ಷಿಸಿ ದೃಢಪಡಿಸಿಕೊಳ್ಳಲು ಜರ್ಮನಿಗೆ ಹೊರಟಿರುವೆ ಎಂದರು. ಸ್ವಾಮೀಜಿಯವರು ನಸುನಕ್ಕು, ನಮ್ಮನ್ನು ಗುಲಾಮರಂತೆ ನೋಡುವ ಪಾಶ್ಚ್ಯಾತ್ಯರು ನಮ್ಮ ಮಣ್ಣಿನಲ್ಲಿ ಕಬ್ಬಿಣದ ಅಂಶ ಇದ್ದರೂ ಇದೆ ಎಂದು ಹೇಳುವಷ್ಟು ವಿಶಾಲ ಮನಸ್ಸುಳ್ಳವರೇ? ಸಾಧ್ಯವಿಲ್ಲ ಎಂದರು.

ಹಾಗಾದರೆ ಏನು ಮಾಡುವುದು? ನಮ್ಮ ಭಾರತದಲ್ಲಿ ಪರೀಕ್ಷಿಸಲು ಸೌಲಭ್ಯಗಳಿಲ್ಲ, ವೈಜ್ಞಾನಿಕ ತಂತ್ರಜ್ಞಾನಗಳಿಲ್ಲ. ಪಾಶ್ಚಾತ್ಯರ ತಂತ್ರಜ್ಞಾನವೆ ನಮಗೆ ಗತಿಯಲ್ಲವೆ ಎಂದಾಗ, “ವಿಚಾರಗಳ ಸಿಡಿಲಮರಿ” ಎಂದೇ ಖ್ಯಾತಿಯಾದ ಸ್ವಾಮೀಜಿ ಅವರು ಹೇಳಿದರಂತೆ ಇಂತಹ ವೈಜ್ಞಾನಿಕ ಸಂಶೋಧನಾ ಕೇಂದ್ರವನ್ನು, ಸಾಮರ್ಥ್ಯವಿರುವ ನೀವೇ ಏಕೆ ಆರಂಭಿಸಬಾರದು? ಹಾಗಾದಲ್ಲಿ ಬೇರೆಯವರ ಮೇಲಿನ ಅವಲಂಬನೆ ತಪ್ಪುವುದು.

ಟಾಟಾ ರವರಿಗೆ ನಿಜವೆನಿಸಿ ಸ್ವಾಮೀಜಿಯವರ ಹೆಚ್ಚಿನ ಮಾರ್ಗದರ್ಶನಕ್ಕೆ ವಿನಂತಿಸಿದಾಗ, ಮೈಸೂರು ಮಹಾರಾಜರು ವಿಶಾಲ ಮನೋಭಾವದವರು. ಅವರ ಸಹಾಯ ಪಡೆದುಕೊಳ್ಳಿ ಎಂದು ಶಿಫಾರಸು ಪತ್ರವನ್ನು ಬರೆದು ಕೊಟ್ಟರಂತೆ. ಅದರ ಪ್ರಕಾರ ಟಾಟಾರವರು ಮೈಸೂರಿನ ಮಹಾರಾಜರಿಗೆ ವಿನಂತಿಸಿ ಬೇಡಿಕೆ ಇಟ್ಟಾಗ, ನಮ್ಮ ಮೈಸೂರಿನ ಹೆಮ್ಮೆಯ ಮಹಾರಾಜರು ಬೆಂಗಳೂರಿನಲ್ಲಿ ನೂರಾರು ಎಕರೆ ಜಮೀನನ್ನು ಕೊಡಮಾಡಿ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಹಸಿರು ನಿಶಾನೆ ಕೊಟ್ಟರು. ಪ್ರತಿಫಲವಾಗಿ ಬೆಂಗಳೂರಿನ ಪ್ರತಿಷ್ಠಿತ “ಭಾರತೀಯ ವಿಜ್ಞಾನ ಸಂಸ್ಥೆ” (Indian Institute of Science- IISc ) ಅಥವಾ “ಟಾಟಾ ಇನ್ಸ್ಟಿಟ್ಯೂಟ್” ಪ್ರಾರಂಭವಾಯಿತು. ಈ ಸಂಸ್ಥೆಯಲ್ಲಿ ನಡೆಯುವ ಸಂಶೋಧನೆಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿವೆ.

ಮೇಲೆ ಹಾರಾಡುವ ಆಧುನಿಕ “DRONE” ಗಳನ್ನು ರಿಮೋಟ್ ಬದಲಾಗಿ ನಮ್ಮ ಮನಸ್ಸಿನಿಂದಲೇ ನಿಯಂತ್ರಿಸುವ ಸಂಶೋಧನೆ ಇಲ್ಲಿ ಆಗಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. “MIND CONTROLED DRONE”. ಇಲ್ಲಿ ನಡೆಯುವ ಸಂಶೊಧನೆಯ ಆಳಕ್ಕೆ ಇದೊಂದು ಸಣ್ಣ ಉದಾಹರಣೆ.

ನೋಬೆಲ್ ಪಾರಿತೋಷಕ ಪಡೆದ ಖ್ಯಾತ ವಿಜ್ಞಾನಿ ಶ್ರೀ ಸಿ.ವಿ ರಾಮನ್ ರವರು 1934 ರಲ್ಲಿ ಡೈರೆಕ್ಟರ್ ಆಗಿದ್ದರು. ಮುಂದೆ Space scientist ಸತೀಶ್ ಧವನ್ ರವರು 1962 ರಲ್ಲಿ ಮತ್ತು “ಭಾರತ ರತ್ನ” ಪಡೆದ ಖ್ಯಾತ C N R ರಾವ್ ಅವರು ಡೈರೆಕ್ಟರ್ ಆಗಿ ಮುಂದುವರೆಸಿದ ಪ್ರತಿಷ್ಠಿತ ಸಂಸ್ಥೆ ಇದಾಗಿದೆ. ಜಗತ್ತಿನಾದ್ಯಂತವಿರುವ ಟಾಪ್ 100 ಸಂಶೋಧನಾ ಯುನಿವರ್ಸಿಟಿಗಳಲ್ಲಿ “ಭಾರತೀಯ ವಿಜ್ಞಾನ ಸಂಸ್ಥೆ”ಯೂ ಒಂದು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.

ಕನ್ನಡ ನಾಡಿನಲ್ಲಿ ಇರುವ ಇಂತಹ ಪ್ರತಿಷ್ಠಿತ ಬೃಹತ್ ಸಂಶೋಧನಾ ಸಂಸ್ಥೆಯ ಹುಟ್ಟಿನ ಹಿಂದೆ ಇರುವುದು ಸ್ವಾಮಿ ವಿವೇಕಾನಂದರ ಸರಳ ವಿಚಾರಧಾರೆಗಳ ಪ್ರೇರಣೆ.

ಸದ್ವಿಚಾರಗಳು ಏನನ್ನಾದರೂ ಹುಟ್ಟು ಹಾಕಬಲ್ಲವು. ಅಲ್ಲವೆ! ಸದಾ ಸರಳ ಮತ್ತು ಸುವಿಚಾರಗಳು ನಮ್ಮಿಂದ ಹೊರಹೊಮ್ಮುತಿರಲಿ. ಯಾವ ವಿಚಾರ ಯಾರಲ್ಲಿ ಕಿಡಿಹೊತ್ತಿಸುತ್ತದೆ ಯಾರಿಗೂ ತಿಳಿದಿಲ್ಲ.ರಾಜ್ಯಾದ್ಯಂತ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಆರೋಗ್ಯಾಧಿಕಾರಿಗಳ ದಾಳಿ: 156 ನಕಲಿ ವೈದ್ಯರು ಪತ್ತೆ

ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು “ರಾಷ್ಟ್ರೀಯ ಯುವ ದಿನ”ವನ್ನಾಗಿ ಆಚರಿಸುತ್ತಾ ಬಂದಿರುವೆವು.

ಡಾ. ರಾಜಶೇಖರ ನಾಗೂರ

Share This Article
Leave a comment