ನ್ಯಾಯಾಧೀಶನೆ ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ

Team Newsnap
1 Min Read

ಕ್ಯಾಲಿಫೋರ್ನಿಯಾದಲ್ಲಿ ನ್ಯಾಯಾಧೀಶರೊಬ್ಬರು (Judge )ತನ್ನ ಹೆಂಡತಿಯನ್ನು ಗುಂಡು ಹಾರಿಸಿ ಕೊಂದ ಘಟನೆ ನಡೆದಿದೆ.

`ನಾನು ನಾಳೆ ಕೋರ್ಟ್‍ಗೆ ಬರುವುದಿಲ್ಲ, ಕಸ್ಟಡಿಯಲ್ಲಿರುತ್ತೇನೆ’ ಎಂದು ಕೊಂದ ಬಳಿಕ ತನ್ನ ಸಹದ್ಯೋಗಿಯೊಬ್ಬರಿಗೆ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪತ್ನಿಯನ್ನು ಕೊಲೆಗೈದ ಆರೋಪಿ ನ್ಯಾಯಾಧೀಶ ಜೆಫ್ರಿ ಫರ್ಗುಸನ್ (72) ಮನೆಯಲ್ಲಿ ಪರವಾನಿಗೆ ಹೊಂದಿದ್ದ ಸುಮಾರು 47 ಬಂದೂಕುಗಳು ಮತ್ತು 26,000 ಸಜೀವ ಮದ್ದುಗುಂಡುಗಳು ಪತ್ತೆಯಾಗಿದೆ .

ಎದೆಗೆ ಗುಂಡೇಟು ಬಿದ್ದು ಆತನ ಪತ್ನಿ ಪೊಲೀಸರು ತೆರಳಿದ್ದಾಗ ಮೃತಪಟ್ಟಿದ್ದಳು. ಈ ವೇಳೆಯಲ್ಲಿ ಜೆಫ್ರಿ ಫರ್ಗುಸನ್ ವಿಪರೀತವಾಗಿ ಕುಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಚಲುವರಾಯಸ್ವಾಮಿ ಮಾಟ ಮಂತ್ರ ಮಾಡಿಸುತ್ತಾನೆ – ಸುರೇಶ್ ಗೌಡ

ಆಗಸ್ಟ್ 3 ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅನಾಹೈಮ್ ನಗರದ ರೆಸ್ಟೋರೆಂಟ್‍ ನಲ್ಲಿ ಜಗಳ ಪ್ರಾರಂಭಿಸಿದ್ದು , ಮನೆಗೆ ತೆರಳಿದ್ದ ಅವರು ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a comment