November 22, 2024

Newsnap Kannada

The World at your finger tips!

wedding

ಪತ್ನಿಗಾಗಿ ಹಂಬಲಿಸುವ ಪತಿ:ಪೋಷಕರು, ಅಧಿಕಾರಿಗಳೇ ವಿಲನ್ ಗಳು…..

Spread the love

ಪ್ರೀತಿಸಿ ಮದ್ವೆಯಾಗಿದ್ದ ಜೋಡಿಗಳು. ಮದ್ವೆಗೆ ಸಾಕ್ಷಿಯಾಗಿ ವಿವಾಹ ನೋಂದಣಿ ಕೂಡ ಆಗಿದೆ. ಸಂಸಾರ ಆರಂಭಿಸುವ ಹೊತ್ತಿಗೆ ಯುವತಿಯ ಪೋಷಕರ ದೂರಿನ‌ ಮೇರೆಗೆ ಅಪ್ರಾಪ್ತೆಯೆಂಬ ಕಾರಣ ಹೇಳಿ ಆಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳಿಸಿ ಘಟನೆ ಮಂಡ್ಯ ದಲ್ಲಿ ನಡೆದಿದೆ.

ಮದುವೆಯಾದ ಯುವಕ ತನ್ನ ಪತ್ನಿಗಾಗಿ ಕಣ್ಣೀರು ಹಾಕುತ್ತಿದ್ದಾನೆ. ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಲಿಂಗೇಶ್ , ಅದೇ ಗ್ರಾಮದ ಋತುಶ್ರೀ ಎಂಬ ಯುವತಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದನು.

ಹುಡುಗಿಗೆ 18 ವರ್ಷ ತುಂಬಿದ ಮೇಲೆ ಕಳೆದ ಆಗಸ್ಟ್​ ತಿಂಗಳು ಮನೆ ಬಿಟ್ಟು ಓಡಿ ಹೋಗಿದ್ದರು. ಜೊತೆಗೆ ತಮ್ಮ ವಿವಾಹ ವನ್ನು ಕೂಡ ನೊಂದಣಾಧಿಕಾರಿ ಕಚೇರಿಯಲ್ಲಿ‌ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಸಂಸಾರ ಆರಂಭಿಸಬೇಕು ಎನ್ನುವಷ್ಟರಲ್ಲಿ ಹುಡುಗಿಯ ತಾಯಿ,‌ ಆಕೆ ಅಪ್ರಾಪ್ತೆ, ಆಕೆಗಿನ್ನು‌18 ವರ್ಷ ತುಂಬಿಲ್ಲ ಎಂದು ಕೆರಗೋಡು ಪೊಲೀಸರಿಗೆ ದೂರು ನೀಡಿದಳು. ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದರು.

ಹುಡುಗಿಯ ಹೇಳಿಕೆ ಮತ್ತು ದಾಖಲೆ ಪರಿಶೀಲನೆ ನಡೆಸಿದಾಗ ಹುಡುಗಿ ತಾನೇ ಸ್ವಇಚ್ಛೆಯಿಂದ ಮದುವೆ ಯಾಗಿರುವುದಾಗಿ ತಿಳಿಸಿದ್ದರಿಂದ ಪೊಲೀಸರು‌ ಬಿಟ್ಟು ಕಳುಹಿಸಿದ್ದರು.

ಆದ್ರೆ ಋತುಶ್ರೀ ತಾಯಿ‌ ಮಾತ್ರ ತನ್ನ ಪ್ರಭಾವ ಬಳಸಿ ಮಹಿಳಾ‌ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಗೆ ನಕಲಿ ಜನ್ಮ ಪ್ರಮಾಣ ಪತ್ರ ಸಲ್ಲಿಸಿದ್ದಾಳೆ. ಈ ದಾಖಲೆ ಪಡೆದ ಅಧಿಕಾರಿಗಳು ಇದೀಗ ಆ ಬಾಲಕಿಯನ್ನು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

18 ವರ್ಷ ತುಂಬಿದ್ದಕ್ಕೆ ದಾಖಲೆಗಳನ್ನು ಒದಗಿಸಿದರೂ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಹಾಗೂ ತಾನು ಪ್ರೀತಿಸಿ ಮದುವೆಯಾದ ಹುಡುಗಿಯನ್ನು ತನಗೆ ಬಿಟ್ಟು ಕೊಡಲು ಪೋಷಕರೇ ಅಡ್ಡಗಾಲು ಹಾಕಿದ್ದಾರೆ ಎನ್ನುವುದು ಋತುಶ್ರೀ ಪತಿ ಲಿಂಗಪ್ಪ ದೂರು.

ಮಕ್ಕಳ ಸಮಿತಿಯ ಹೊಣೆ ಎಷ್ಟು ?

ಮಕ್ಕಳ ಕಲ್ಯಾಣ ಸಮಿತಿಯವರು 18 ವರ್ಷ ತುಂಬಿದ್ದರು ಈ ಯುವತಿಯನ್ನು ಬಿಡುಗಡೆ ಮಾಡದೆ ಪೋಷಕರ ಒತ್ತಡಕ್ಕೆ ಮಣಿದು ಅಧಿಕಾರಿಗಳಿಗೂ ಸಬೂಬು ಹೇಳಿಕೊಂಡು ಯುವತಿ ಬಾಲಮಂದಿರದಲ್ಲಿರುವಂತೆ ಆದೇಶಿಸಿದ ಹಿನ್ನಲೆ ತಮಗೆ ಅರ್ಥವಾಗುತ್ತಿಲ್ಲವೆಂದು ಆಕೆಯ ಪತಿ ಲಿಂಗಪ್ಪ ಮಾಧ್ಯಮದ ಎದುರು ಹೇಳಿದ್ದಾರೆ

Copyright © All rights reserved Newsnap | Newsever by AF themes.
error: Content is protected !!