June 9, 2023

Newsnap Kannada

The World at your finger tips!

mysuru dasara

ಇಂದಿನಿಂದ ಅದ್ದೂರಿ ಮೈಸೂರು ದಸರಾ : ರಾಷ್ಟ್ರಪತಿಗಳಿಂದ ಉದ್ಘಾಟನೆ -ಎಲ್ಲೆಲ್ಲಿ ಏನು ಕಾರ್ಯಕ್ರಮ ?

Spread the love

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆ ಆಗಿದೆ. ದಸರಾ ಅಧೀಕೃತ ಉದ್ಘಾಟನೆಗೆ ಕ್ಷಣ ಗಣನೆ ಆರಂಭವಾಗಿದೆ.

ಇಂದಿನಿಂದ 9 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ವೈಭವ ಆರಂಭವಾಗಲಿದೆ.ವೈಭಪೂರಿತ ದಸರಾ ಮಹೋತ್ಸವಕ್ಕೆ ಇಂದು ರಾಷ್ಟ್ರಪತಿ ದ್ರೌಪತಿ ಮುರ್ಮ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ರಾಷ್ಟ್ರಪತಿ ಮುರ್ಮು, ತಾಯಿ ಚಾಮುಂಡಿ ಉತ್ಸವ ಮೂರ್ತಿಗೆ ಪುಷ್ಪರ್ಚಾನೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಚಾಲನೆ ನೀಡಲಿದ್ದಾರೆ. ರಾಜ್ಯಪಾಲರು, ಸಿಎಂ, ಕೇಂದ್ರ ಸಚಿವರು ಜೊತೆಯಲ್ಲಿ ಇರಲಿದ್ದಾರೆ.

ಅಂಬಾವಿಲಾಸ ಅರಮನೆಯಲ್ಲಿ ಇಂದಿನಿಂದ ಖಾಸಗಿ ದರ್ಬಾರ್ ನಡೆಯಲಿದೆ, ಗತಕಾಲದ ವೈಭವ ಮರುಕಳಿಸಲಿದೆ. ದಸರಾ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿರುವ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೆ ಭರದ ಸಿದ್ಧತೆ ಪೂರ್ಣಗೊಂಡಿದೆ.ಇದನ್ನು ಓದಿ : ದಸರಾ ಹಬ್ಬದ ಆಚರಣೆಯ ಮಹತ್ವ

ಅಕ್ಟೋಬರ್ 5ರವರೆಗೆ ನಗರದ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನದ ಏರ್ಪಡಿಸಲಾಗಿದೆ.
ದಸರಾ ತಯಾರಿಯನ್ನು ಸಿಎಂ ಬೊಮ್ಮಾಯಿ ವೀಕ್ಷಿಸಿ ರಾತ್ರಿ ಸಿಟಿ ರೌಂಡ್ಸ್ ಮಾಡುವ ಮೂಲಕ ವಿದ್ಯುತ್ ದೀಪಾಲಂಕಾರವನ್ನು ನೋಡಿದರು.

ಇಂದಿನ ಕಾರ್ಯಕ್ರಮಗಳು:

 • ಬೆಳಗ್ಗೆ 9:45 ರಿಂದ 10.05ರ ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆ
 • ಮಧ್ಯಾಹ್ನ 12:00 – ಕೈಗಾರಿಕಾ ದಸರಾ ಉದ್ಘಾಟಿಸಲಿರುವ ಸಚಿವ ನಿರಾಣಿ ಸ್ಥಳ: ವಿಜ್ಞಾನ ಭವನ
 • ಮಧ್ಯಾಹ್ನ 12:30 – ಶಿವರಾಜ್‍ಕುಮಾರ್ ಅವರಿಂದ ಚಲನಚಿತ್ರೋತ್ಸವ ಉದ್ಘಾಟನೆ ಸ್ಥಳ: ಕಲಾಮಂದಿರ
 • ಮಧ್ಯಾಹ್ನ 12.30 – ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಮುನಿರತ್ನ ಸ್ಥಳ: ಕುಪ್ಪಣ್ಣ ಪಾರ್ಕ್
 • ಮಧ್ಯಾಹ್ನ 1.00 – ಸಚಿವ ಎಸ್‍ಟಿಎಸ್ ಅವರಿಂದ ಆಹಾರ ಮೇಳ ಉದ್ಘಾಟನೆ ಸ್ಥಳ: ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ
 • ಮಧ್ಯಾಹ್ನ 3:30 – ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿರುವ ಸಿಎಂ ಬೊಮ್ಮಾಯಿ, ಸ್ಥಳ: ದೇವರಾಜ ಅರಸು ಕ್ರೀಡಾಂಗಣ
 • ಸಂಜೆ 4- ವಸ್ತು ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಆನಂದ್ ಸಿಂಗ್
 • ಸಂಜೆ 5 – ಯೋಗ ದಸರಾ, ನೃತ್ಯರೂಪಕ, ಸ್ಥಳ: ಓವೆಲ್ ಮೈದಾನ
 • ಸಂಜೆ 5:30 – ಅರಮನೆಯಲ್ಲಿ ಸಚಿವ ಎಸ್‍ಟಿ. ಸೋಮಶೇಖರ್ ಅವರಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ ಉದ್ಘಾಟನೆ
 • ಸಂಜೆ 5:30 – ರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನ ಉದ್ಘಾಟಿಸಲಿರುವ ಸಚಿವ ಸುನೀಲ್ ಕುಮಾರ್, ಸ್ಥಳ: ಕಲಾಮಂದಿರ
 • ಸಂಜೆ 6 – ಅರಮನೆ ವೇದಿಕೆ ಕಾರ್ಯಕ್ರಮ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ, ಉದ್ಘಾಟನೆ ಸಿಎಂ ಬೊಮ್ಮಾಯಿ
 • ಸಂಜೆ 6:30 – ವಿದ್ಯುತ್ ದೀಪಾಲಂಕಾರ ಉದ್ಘಾಟಿಸಲಿರುವ ಸಚಿವ ಸುನೀಲ್ ಕುಮಾರ್, ಸ್ಥಳ: ಸಯ್ಯಾಜಿ ರಾವ್ ರಸ್ತೆ
error: Content is protected !!