March 13, 2026

Newsnap Kannada

The World at your finger tips!

doni bali

ದೋಣಿವಿಹಾರಕ್ಕೆ ಹೋದ ತಂದೆ, ಮಗ ಸೆಲ್ಫಿಗೆ ಬಲಿ

Spread the love

ದೋಣಿವಿಹಾರಕ್ಕೆ ಹೋದ ತಂದೆ, ಮಗ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಲಿ
ಘಟನೆ ಮಹಾರಾಷ್ಟ್ರದ ಉಜನಿ ಹಿನ್ನೀರಿನಲ್ಲಿ ಸೋಮವಾರ ಜರುಗಿದೆ. 13 ವರ್ಷದ ಮಗ ಮತ್ತು 49 ವರ್ಷದ ತಂದೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸೆಲ್ಫಿ ಹುಚ್ಚಾಟಕ್ಕೆ ಇಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.ದಂಪತಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹಿನ್ನೀರಿನಲ್ಲಿ ದೋಣಿ ವಿಹಾರಕ್ಕೆ ಹೋಗಿದ್ದಾರೆ.

ಈ ವೇಳೆ ಬೇರೆ ಬೇರೆ ಪೋಸ್ ಕೊಟ್ಟು ಸೆಲ್ಫಿ ತೆಗೆದುಕೊಂಡಿದ್ದಾರೆ. ಸೆಲ್ಫಿಗೆ ಪೋಸ್ ಕೊಡುತ್ತಾ ತುದಿಯವರೆಗೂ ಹೋಗಿ ನಿಂತಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ನೀರಿಗೆ ದೋಣಿಯಲ್ಲಿದ್ದ 6 ಮಂದಿ ಬಿದ್ದಿದ್ದಾರೆ.

ದೋಣಿ ಮಗುಚಿರುವುದನ್ನು ಕಂಡು ಹತ್ತಿರದಲ್ಲೇ ಇದ್ದ ಮೀನುಗಾರರು ಬಂದು ರಕ್ಷಣೆ ಮಾಡುವಷ್ಟರಲ್ಲಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಉಳಿದವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬರಲಾಗಿದೆ ಎಂದು ಸೊಲ್ಲಾಪುರ ಎಸ್‍ಪಿ ತೇಜಸ್ವಿ ಸತ್ಪು ತಿಳಿಸಿದರು.

error: Content is protected !!