ಮಠಾಧೀಶರು ತಲೆ ಮೇಲೆ ಕಾವಿ ಬಟ್ಟೆ ಹಾಕಿಕೊಳ್ಳುವುದಿಲ್ಲವೆ? ಸಿದ್ದು ವಿವಾದಾತ್ಮಕ ಹೇಳಿಕೆ

Team Newsnap
1 Min Read

ಮುಸ್ಲಿಂ ಮಹಿಳೆಯರು ಹಿಜಾಬ್ ಹಾಕುವುದನ್ನು ಯಾಕೆ ತಡೆಯುತ್ತೀರಿ.? ಅದರಲ್ಲಿ ತಪ್ಪೇನು ಇದೆ ಹಿಂದೂ ಮಹಿಳೆಯರು ತಲೆ ಮೇಲೆ ಸೀರೆ ಹಾಕಲ್ವಾ ? ಅಷ್ಟೇ ಯಾಕೆ ಸ್ವಾಮೀಜಿಗಳು (ಮಠಾಧೀಶರು)ತಲೆ ಮೇಲೆ ಖಾವಿ ಬಟ್ಟೆ ಹಾಕಿಕೊಳ್ಳುತ್ತಾರೆ. ನೀವು ಇವರನ್ನು ತಡೆಯುತ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮುಸ್ಲಿಂ ಮಹಿಳೆಯರು ಹಾಕಿಕೊಳ್ಳುವ ಹಿಜಾಬ್ ಅನ್ನು ಸಮಥಿ೯ಸುವ ವೇಳೆ ಸ್ವಾಮೀಜಿ ಖಾವಿ ಬಟ್ಟೆ ಹಾಕಿಕೊಳ್ಳುವ ಉದಾಹರಣೆ ನೀಡಿ ವಿವಾದದ ಗೂಡಿಗೆ ಸಿದ್ದು ಕೈ ಹಾಕಿದ್ದಾರೆ.

ಜೈನ ಮಹಿಳೆಯರೂ ಕೂಡ ತಲೆ ಮೇಲೆ ಸೆರಗು ಹಾಕಿಕೊಳ್ಳತ್ತಾರೆ. ಯಾಕೆ ಸುಮ್ಮನೆ ಎಲ್ಲವನ್ನೂ ವಿವಾದ ಮಾಡ್ತೀರಾ ಎಂದು ಬಿಜೆಪಿ ಪ್ರಶ್ನೆ ಮಾಡಿದ ಸಿದ್ದು, ಅಲ್ಪ ಸಂಖ್ಯಾತರು ಕೊಲೆಯಾದರೆ ಪರಿಹಾರ ನೀಡುವಾಗಲೂ ತಾರತಮ್ಯ ಮಾಡುವುದನ್ನು ಎತ್ತಿ ತೋರಿಸಿದರು.

ಬಿಜೆಪಿಯು ಮತ ಕ್ರೋಢೀಕರಣ ರಾಜಕಾರಣ ಮಾಡುತ್ತದೆ ಎನ್ನುವ ಸಂಗತಿ ಜನರಿಗೆ ಎಲ್ಲಾ ಗೊತ್ತಿದೆ.
ಮುಸ್ಲಿಂರಿಗೆ ವ್ಯಾಪಾರ ನಿಬ೯ಂಧ ಹೇರಿ ದ್ವೇಷದ ರಾಜಕಾರಣ ಮಾಡುತ್ತದೆ ಎಂದರು.

Share This Article
Leave a comment