ಜನರಿಗೆ ವಂಚಿಸಿದ ಪ್ರಕರಣ : ಮಂತ್ರಿ ಗ್ರೂಪ್ CMD ಸುಶೀಲ್ ಪಾಂಡುರಂಗ ಬಂಧಿಸಿದ CID

Team Newsnap
1 Min Read

ಬೆಂಗಳೂರಿನ ಮಂತ್ರಿ ಗ್ರೂಪ್ಸ್​ನ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಹಾಗೂ ಅವರ ಮಗ ಪ್ರತೀಕ್ ಮಂತ್ರಿ ಅವರನ್ನು ಸಿಐಡಿ ವಿಶೇಷ ತನಿಖಾ ತಂಡ ಬಂಧಿಸಿದೆ.

ಸುಶೀಲ್ ಪಾಂಡುರಂಗ ತಮ್ಮ ಗ್ರಾಹಕರಿಗೆ ವಂಚನೆ ಮಾಡಿದ್ದಾರೆ. ಜೊತೆಗೆ ಗ್ರಾಹಕರಿಂದ ಬಂದಿದ್ದ ಖರೀದಿ ಹಣವನ್ನ ದುರ್ಬಳಕೆ ಮಾಡಿದ್ದಾರೆಂಬ ಆರೋಪ ಇತ್ತು.

ಕಳೆದ ಜೂನ್ 25 ರಂದು ಇ.ಡಿ ಅರೆಸ್ಟ್ ಮಾಡಿ ತನಿಖೆ ನಡೆಸಿತ್ತು. ಅದಾದ ಬಳಿಕ ಜಾಮೀನಿನ ಮೇಲೆ ಸುಶೀಲ್ ಪಾಂಡುರಂಗ ಹೊರ ಬಂದಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಬಾರಿ ‘ಮೈಸೂರು ದಸರಾ’ – ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಉದ್ಘಾಟನೆ

ಸಾವಿರಾರು ಗ್ರಾಹಕರಿಂದ 1000 ಕೋಟಿ ಸಂಗ್ರಹಿಸಿದ್ದರು. 7 ರಿಂದ 10 ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಸುಳ್ಳು ದಾಖಲೆಗಳನ್ನು ತೋರಿಸಿ ವಂಚಿಸಿದ್ದಾರೆ. ಕಲೆಕ್ಟ್ ಮಾಡಿಕೊಂಡಿದ್ದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಹಲವಾರು ಆರೋಪಗಳು ಕೇಳಿ ಬಂದಿದ್ದವು.

ಈ ಕುರಿತು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿವೆ.

Share This Article
Leave a comment