ಲಾರಿಗೆ ಡಿಕ್ಕಿ ಹೊಡೆದ ಕಾರು – 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವ ದಂಪತಿ ಸಾವು

Team Newsnap
1 Min Read
Dowry Harassment: Complaint by wife against IAS officer ವರದಕ್ಷಿಣೆ ಕಿರುಕುಳ : IAS ಅಧಿಕಾರಿ ವಿರುದ್ಧ ಪತ್ನಿಯಿಂದಲೇ ದೂರು

ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನವ ದಂಪತಿ ಸಾವನಪ್ಪಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ.

ರಘು (35) ಹಾಗೂ ಅನುಷಾ (28) ಮೃತ ನವ ದಂಪತಿ.7 ನೇ ವೇತನಾ ಆಯೋಗದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಉತ್ತರಗಳು

ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಳನಹಳ್ಳಿಯಿಂದ ಬಳ್ಳಾರಿಗೆ ಮದುವೆಗೆ ಹೋಗುತಿದ್ದರು. ಈ ವೇಳೆ ಹುಳಿಯಾರ್ ಗೇಟ್ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು‌ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ದಂಪತಿ‌ ಅಸುನೀಗಿದ್ದಾರೆ.

ಹಾಸನ ಜಿಲ್ಲೆ ಅರಸಿಕೇರೆ ಮೂಲದ ರಘು ಹಾಗೂ ಚಿಕ್ಕನಾಯಕನಹಳ್ಳಿಯ ತಿಗಳನಹಳ್ಳಿಯ ಅನುಷಾ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, ಪ್ರೀತಿಸಿ ಮದುವೆ ಆಗಿದ್ದರು. ಘಟನೆ ಸಂಬಂಧ ಹುಳಿಯಾರು‌ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment