December 23, 2024

Newsnap Kannada

The World at your finger tips!

bus benki

ಹೊತ್ತಿ ಉರಿದ ಬಿಎಂಟಿಸಿ ಬಸ್ : ತಪ್ಪಿದ ಭಾರೀ ಅನಾಹುತ

Spread the love

ಬೆಂಗಳೂರಿನ ಮಕ್ಕಳ ಕೂಟ ಸರ್ಕಲ್ ಬಳಿ (KA57F 1592 ) ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ.

ಬೆಂಕಿ ಹೊತ್ತಿಕೊಳ್ತಿದ್ದಂತೆ ಚಾಲಕ ಬಸ್​ ನಿಲ್ಲಿಸಿದ್ದಾನೆ, ಪರಿಣಾಮ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿಯಾಗಿದೆ.

ಬಸ್ ಕೆ.ಆರ್​.ಮಾರುಕಟ್ಟೆಯಿಂದ ವಿವಿಪುರಂ ಮಾರ್ಗವಾಗಿ ಮಕ್ಕಳಕೂಟ ಬಸ್ ನಿಲ್ದಾಣಕ್ಕೆ ಬರುತ್ತಿತ್ತು ಸುಮಾರು 40 ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!