February 20, 2026

Newsnap Kannada

The World at your finger tips!

school , learning , teaching

ಬೋಧನಾ ಶುಲ್ಕ ಶೇ.30 ರಷ್ಟು ಕಡಿತ; ಅಭಿವೃದ್ಧಿ ಶುಲ್ಕ ಈ ವರ್ಷ ರದ್ದು- ಸರ್ಕಾರದ ಆದೇಶ

Spread the love

ಖಾಸಗಿ ಶಾಲೆಗಳು ಬೋಧನಾ ಶುಲ್ಕ ಶೇ. 30 ರಷ್ಟು ಕಡಿತ ಹಾಗೂ ಅಭಿವೃದ್ದಿ ಶುಲ್ಕ ವನ್ನೂ ಪಡೆಯುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರ್ಕಾರದ ನಿರ್ಧಾರ ಪ್ರಕಟಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಖಾಸಗಿ ಶಾಲೆಗಳು ಬೋಧನಾ ಶುಲ್ಕವನ್ನು ಶೇ. 70 ರಷ್ಟು ಮಾತ್ರ ಪಡೆಯಬೇಕು. ಯಾವುದೇ ಕಾರಣಕ್ಕೂ ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ ಎಂದಿದ್ದಾರೆ.

ಸಚಿವ ಸುರೇಶ್ ಕುಮಾರ್ ಹೇಳಿದ್ದೇನು..?

1) ಬೋಧನಾ ಶುಲ್ಕ ಶೇಕಡಾ 70 ರಷ್ಟು ಪಡೆಯಬೇಕು

2) ಖಾಸಗಿ ಶಾಲೆಗಳು ಶೇ. 30 ರಷ್ಟು ಶುಲ್ಕ ಕಡಿತ ಮಾಡಬೇಕು

3)ಯಾವುದೇ ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡಬಾರದು

4) ಯಾವುದೇ ಶಾಲೆಗಳು ಡೊನೇಷನ್ ತೆಗೆದುಕೊಳ್ಳಬಾರದು

5) ಬೇರೆ ಬೇರೆ ಟ್ರಸ್ಟ್​ಗೆ ಶುಲ್ಕ ತೆಗೆದು ಕೊಳ್ಳುವಂತಿಲ್ಲ

6) ಕಳೆದ ವರ್ಷದ ಟ್ಯೂಷನ್ ಫೀ ತೆಗೆದುಕೊಳ್ಳಬಾರದು

7) ಕೆಲವು ಶಾಲೆಗಳಲ್ಲಿ ಶೇಕಡ 40 ಪರ್ಸೆಂಟ್ ಕಡಿತ ಮಾಡಲು ನಿರ್ಧರಿಸಿವೆ.

8) ಶುಲ್ಕವನ್ನು ಕಂತುಗಳ ಆಧಾರದ ಮೇಲೆ ಕಟ್ಟಲು ಅವಕಾಶ ನೀಡಬೇಕು.

9) ಶುಲ್ಕಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಶಿಕ್ಷಣ ಇಲಾಖೆಗೆ ದೂರು ನೀಡಬಹುದು

error: Content is protected !!