ಪ್ರೇಮಿಗಳ ದಿನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ಪ್ರೇಮಿಗಳ ಸಂಭ್ರಮ ಆಗಲೇ ಆರಂಭವಾಗಿದೆ. ಹಿಂದಿನ ಕಾಲದಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಸಲ್ಲಾಪಗಳು ಬಸ್ ನಿಲ್ದಾಣದವರೆಗೂ ಬಂದಿವೆ.
ಪ್ರೇಮಿಗಳು ಸಾರ್ವಜನಿಕವಾಗಿ ಚುಂಬಿಸುವುದು ವಿದೇಶಿ ಸಂಸ್ಕೃತಿ ಎಂದು ಕೊಂಡಿದ್ದೆವು. ಆದರೆ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಯುವಕ – ಯುವತಿಯೊಬ್ಬಳು ಬಸ್ ನಿಲ್ದಾಣದಲ್ಲೇ ಯಾವ ಎಗ್ಗೂ ಇಲ್ಲದೆ ಪರಸ್ಪರ ಮುತ್ತಿಟ್ಟು ಕೊಂಡು ಸಾರ್ವಜನಿಕರು ತಲೆತಗ್ಗಿಸುವಂತೆ ಮಾಡಿದ್ದಾರೆ.
ಕೆ ಆರ್ ಪೇಟೆ ಬಸ್ ನಿಲ್ದಾಣದಲ್ಲಿ ನೂರಾರು ಜನರ ಮುಂದೆಯೇ ಈ ಇಬ್ಬರು ಪ್ರೇಮಿಗಳು ಕೇರ್ ಮಾಡಿಲ್ಲ.
ಜನರೆಲ್ಲರೂ ನೋಡುತ್ತಿದ್ದಾರೆಂಬ ಭಯ, ನಾಚಿಕೆ ಇಲ್ಲದೆ, ಮುತ್ತಿನ ಮತ್ತಿನಲ್ಲಿ ತೇಲಾಡಿದ್ದಾರೆ.
ಈಗ ಪ್ರೇಮಿಗಳಿಬ್ಬರ ಚುಂಬನದ ದೃಷ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆ ಹುಡುಗ, ಹುಡುಗಿಗೆ ಬುದ್ಧಿ ಇದೆ, ಇಲ್ಲ ಎಂಬುದು ಬೇರೆ ಮಾತು. ಮನೆಯವರಿಗೆ ಏನಾದರೂ ಈ ವಿಡಿಯೋ ನೋಡಿದರೆ ಗತಿ ಏನು ಎಂಬ ನಾಚಿಕೆ, ಭಯ ಇಲ್ಲದೆ ಚುಂಬನಕ್ಕೆ ಆ ಯುವತಿ ಕೂಡ ಸಹಕಾರ ನೀಡಿದ್ದಾಳೆ. ಮುಂದೆ ರಾದ್ದಾಂತ ಏನಾಗುತ್ತದೆಯೋ ಕಾದು ನೋಡಬೇಕು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು