December 20, 2024

Newsnap Kannada

The World at your finger tips!

2c2514b7 a336 4c54 a1f3 8682a669b11e

google images

ರಾಗಿಣಿ ನಟಿಯಾಗಿ‌ ಪ್ರಚಾರ ಮಾಡಿದ್ದಳು – ಡ್ರಗ್ಸ್ ಹುಡುಗಿ ಅಲ್ಲ ಸಚಿವ ರಮೇಶ ಜಾರಕಿಹೊಳಿ

Spread the love

ನ್ಯೂಸ್ ಸ್ನ್ಯಾಪ್
ಬೆಂಗಳೂರು

‘ರಾಗಿಣಿಯವರನ್ನು ಚಲನಚಿತ್ರ ನಟಿ ಎನ್ನುವ ಕಾರಣಕ್ಕಾಗಿ ಚುಣಾವಣಾ ಪ್ರಚಾರಕ್ಕೆ ಆಹ್ವಾನ ನೀಡಿದ್ದೆವು ಹೊರತು ಡ್ರಗ್ಸ್ ಹುಡುಗಿ ಎಂದಲ್ಲ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ರಮೇಶ್ ನಟಿ ರಾಗಿಣಿ ಜೊತೆ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅಥವಾ ನನ್ನ ಜೊತೆ ಪೋಟೋ ಇರಬಹುದು. ಆದರೆ ಈ ವಿಚಾರ ಮಾತನಾಡುವದಕ್ಕೆ ಇದು ಸಮಯವಲ್ಲ. ತನಿಖೆ ಜಾರಿಯಲ್ಲಿದೆ‌. ಯಾವ ಪ್ರಭಾವಿಗಳಿಗೂ ನಾವು ಜಗ್ಗುವದಿಲ್ಲ . ತಪ್ಪಿತಸ್ಥರು ಯಾರೇ ಇದ್ದರೂ ಬಿಡುವುದಿಲ್ಲ ಎಂದರು.

ವಲಸೆ ಬಂದ ಶಾಸಕರನ್ನು ಸಚಿವ ಸಂಪುಟ ಸೇರ್ಪಡೆ ಮಾಡುವ ವಿಚಾರ ಹಾಗೂ ತಮ್ಮ ಪಕ್ಷದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರ ಕುರಿತು ಮಾತನಾಡಿದ ಸಚಿವರು, ‘ಸಚಿವ ಸ್ಥಾನ‌ ಆಕಾಂಕ್ಷಿಗಳು ಕಾಯಬೇಕು ಸರ್. ನಾವು ೧೪ ತಿಂಗಳು ಕಾದಿದ್ದೇವೆ. ಕೋರ್ಟ್, ಕಛೇರಿಗಳನ್ನು ಅಲೆಸಿದ್ದೇವೆ. ಹೈಕಮಾಂಡ್ ಈ ವಿಷಯದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುತ್ತದೆ’ ಎಂದು ತಮ್ಮ ಪಕ್ಷದ ಸಚಿವ ಸ್ಥಾನಾಕಾಂಕ್ಷಿಗಳಿಗೇ ಗುನ್ನ ಇಟ್ಟರು. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ವಿಜಯೇಂದ್ರರ ಮೇಲಿರುವ ಆರೋಪದ ಬಗ್ಗೆ ವಿವರಿಸಿ ‘ವಿಜಯೇಂದ್ರ ಅವರು ನಮ್ಮ ಪಕ್ಷದ ಹೆಮ್ಮೆಯ ಯುವನಾಯಕ. ಅವರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಅವರೂ ಸಹ ಯಡಿಯೂರಪ್ಪನರ ರೀತಿ ಒಳ್ಳೆಯ ನಾಯಕನಾಗಿ ಹೊರಹೊಮ್ಮಲಿದ್ದಾರೆ. ನಮ್ಮ ಪಕ್ಷದವರು ಅವರನ್ನು ವಿರೋಧಿಸುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು

Copyright © All rights reserved Newsnap | Newsever by AF themes.
error: Content is protected !!