January 8, 2025

Newsnap Kannada

The World at your finger tips!

2a8b54c7 5b70 456d 842e b6bf5729b69b

ಭ್ರಷ್ಟೇಂದ್ರನಿಗೆ ಸುರಪಾನ ಅಂದ್ರೆ ಬಲು ಇಷ್ಟ ! ದಂಗಾದ ಎಸಿಬಿ ಅಧಿಕಾರಿಗಳು

Spread the love

ಆ ಇಂದ್ರನಿಗೆ ಸುರಪಾನ ಇಷ್ಟ ! ಈ ದೇವೆಂದ್ರನಿಗೆ, ವಿಸ್ಕಿ , ರಮ್ಮು, 100 ಪೇಪರ್ಸ್ , ಬ್ಲಾಕ್ ಡಾಗ್ ಇಷ್ಟ ! ಹೀಗಾಗಿ ಈ ದೇವೇಂದ್ರ ಭೂ ಮಂಡಲದಲ್ಲಿ ಸಿಗುವ ಎಲ್ಲಾ ಬ್ರಾಂಡ್ ನ ವಿಸ್ಕಿ , ರಮ್ ,ವೊಡ್ಕಾ ತನ್ನ ಆಲಯದಲ್ಲಿ ತರಿಸಿಟ್ಟಿದ್ದ ! ದುರಾದೃಷ್ಟ ಏನೆಂದ್ರೆ ಎಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

064afa5a e5b1 4d4a 97cb 76628a627e22

ಒಸಿ ಕೊಡಲಿಕ್ಕೆ 20 ಲಕ್ಷ ರೂ.‌ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ದೇವೆಂದ್ರ ಮುನಿಯ ಎಣ್ಣೆ ಕಹಾನಿ ಇದು.ಇಪ್ಪತ್ತು ಲಕ್ಷ ರೂ.‌ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಎಸಿಬಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಮನೆ ಶೋಧಕ್ಕೆ ಸೂಚಿಸಿದ್ದಾರೆ.

ಡಿವೈಎಸ್ಪಿ ತಮ್ಮಯ್ಯ ಹಾಗೂ‌ ಸುಬ್ರಮಣಿ ನೇತೃತ್ವದ ತಂಡ ಮನೆ ಮೇಲೆ ದಾಳಿ ನಡೆಸಿದಾಗ ಎಣ್ಣೆ ಮತ್ತಿಗೆ ತಲೆ ಸುತ್ತು ಬಂದಿದೆ.

ನೂರಾರು ಬ್ರಾಂಡ್ ಎಣ್ಣೆ ಬಾಟಲಿ. ಸೈಡ್ಸ್ ಗೆ ಆರೆಂಜ್, ಡ್ರೈ ಫ್ರೂಟ್ಸ್ ಇದ್ದ ದೇವೇಂದ್ರನ ಎಣ್ಣೆ ಲೋಕ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮನೆಯಲ್ಲಿ ಗಬ್ಬು ವಾಸನೆ ನೋಡಿ ಮೂಗು ಮುಚ್ಚಿಕೊಂಡೇ ಶೋಧ ಕಾರ್ಯ ಮಾಡಿದ್ದಾರೆ‌‌ .

ಕಾಲಿಲ್ಲದಿದ್ದರೂ ಕಂತು ಕಂತು ಲಂಚ:

d38a5e01 b4e6 4bde b6e3 308f814300e6

ಎಸಿಬಿ ಬಲೆಗೆ ಬಿದ್ದ ಭ್ರಷ್ಟೇಂದ್ರಪ್ಪ !
ಮನೆಯಲ್ಲಿ ಏಳು ಲಕ್ಷ ನಗದು ಸಿಕ್ಕಿದೆ. ಜತೆಗೆ ಒಂದು ಬಾರ್ ನಲ್ಲಿ ರುವಷ್ಟು ಬಾಟಲಿ ಗಳು ಸಿಕ್ಕಿವೆ. ಒಂದು ಕಾಲಿಲ್ಲದಿದ್ದರೂ ಲಕ್ಷ ಲಕ್ಷ ಲಂಚ ಸ್ವೀಕರಿಸಿ ಜನರ ರಕ್ತ ಹೀರುತ್ತಿದ್ದ ದೇವೇಂದ್ರನ ಸುರಪಾನ ಮಂದಿರ ಜಪ್ತಿ ಮಾಡಿ ಅಬಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಒಬ್ಬ ಮನುಷ್ಯ ಅಗತ್ಯಕ್ಕಿಂತ ಹೆಚ್ವು ಬಾಟಲಿ ಇಟ್ಟುಕೊಳ್ಳುವುದು ಅಪರಾಧ. ಹೀಗಾಗಿ ಎಣ್ಣೆ ಪ್ರಿಯ ದೇವೇಂದ್ರ ಮುನಿಯ ಮೇಲೆ ಅಬಕಾರಿ ಪೊಲೀಸರು ಇನ್ನೊಂದು ಕೇಸು ಜಡಿಯಲಿದ್ದಾರೆ.

feac8168 f394 4137 80c1 64e8b610390f

ಈ ದೇವೇಂದ್ರನ ಪಾನ ಮಂದಿರ ನೋಡಿ ಬಹುಶಃ ಆ ಇಂದ್ರ ಮುನಿ ಗಾಬರಿಯಾಗಿ ದ್ದರೂ ಅಚ್ಚರಿ ಪಡಬೇಕಿಲ್ಲ .ಇನ್ನು ಎಸಿಬಿ ಶೋಧ ದಲ್ಲಿ ಈ ದೇವೇಂದ್ರನ‌, ಮುತ್ತು ರತ್ನಗಳು ಸಿಗಬೇಕಿದ್ದು,ಅದು ಪತ್ತೆಯಾದ ಬಳಿಕ ಈ ದೇವೇಂದ್ರ ಪರಪ್ಪನ ಅಗ್ರಹಾರ ಜೈಲಿಗೆ ತಾತ್ಕಾಲಿಕ ವಾಸ್ತವ್ಯ ಬದಲಿಸಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!