December 25, 2024

Newsnap Kannada

The World at your finger tips!

92aedf68 1e9e 4b81 95e7 bef95758bc6e

ಅಡಕೆ ನುಂಗಿದ ವರ್ಷದ ಮಗು ದುರಂತ ಸಾವು

Spread the love

ಮನೆಯಲ್ಲಿ ಆಟವಾಡಿಕೊಂಡಿದ್ದ ಒಂದು ವರ್ಷ ಮಗು ಅಡಕೆ ನುಂಗಿ ದುರಂತ ಸಾವು ಕಂಡ ಹೃದಯ ವಿದ್ರಾವಕ ಘಟನೆ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಶನಿವಾರ ಜರುಗಿದೆ.

ಸಂದೇಶ್ ಮತ್ತು ಅರ್ಚನಾ ದಂಪತಿ ಪುತ್ರ ಶ್ರೀಹಾನ್(1) ಮೃತ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸಂದೇಶ್​, ಕರೊನಾ ಸಂದರ್ಭದಿಂದ ಹೆದ್ದೂರಿನ ಮನೆಯಲ್ಲಿ ಮಗು ಬಿಟ್ಟಿದ್ದರು.

ಭಾನುವಾರ ಬೆಂಗಳೂರಿಗೆ ಕರೆದು ಕೊಂಡು ಹೋಗುವ ಆಲೋಚನೆಯಲ್ಲಿದ್ದರು. ಅಷ್ಟರಲ್ಲಿ ಅಡಕೆ ರೂಪದಲ್ಲಿ ಬಂದ ಜವರಾಯ ಮಗುವಿನ ಪ್ರಾಣ ತೆಗೆದುಕೊಂಡು ಹೋಗಿದ್ದಾನೆ.

ಇತ್ತೀಚೆಗೆ ಆರೋಗ್ಯ ಇಲಾಖೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀಹಾನ್‌ಗೆ ‘ಆರೋಗ್ಯವಂತ’ ಮಗು ಎಂಬ ಪುರಸ್ಕಾರ ಜತೆಗೆ ನಗದು ಬಹುಮಾನ ನೀಡಿ ಗೌರವಿಸಲಾಗಿತ್ತು.

ಶನಿವಾರ ಬೆಳಗ್ಗೆ ಮನೆಯಲ್ಲಿ ಆಟವಾಡಿಕೊಂಡಿದ್ದ ಶ್ರೀಹಾನ್​, ಹರಿವಾಣ ತಟ್ಟೆಯಲ್ಲಿದ್ದ ಅಡಕೆ ನುಂಗಿ ಉಸಿರುಗಟ್ಟಿ ಒದ್ದಾಡುತ್ತಿದ್ದ.
ಕೂಡಲೇ ಮಗುವನ್ನು ಕಟ್ಟೆಹಕ್ಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಅಲ್ಲಿಂದ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿತು.

Copyright © All rights reserved Newsnap | Newsever by AF themes.
error: Content is protected !!