February 21, 2026

Newsnap Kannada

The World at your finger tips!

sucide

ಪೋಲಿಗಳ ಸಹವಾಸ : ಗೃಹ ಬಂಧನದಿಂದ ಬೇಸತ್ತ ಯುವಕ ಆತ್ಮಹತ್ಯೆ

Spread the love

ಪೋಲಿ ಹುಡುಗರ ಜೊತೆ ಸೇರಿ ಮಗ ಹಾಳಾಗುತ್ತಾನೆಂದು ಮನೆಯಲ್ಲಿ ಇಟ್ಟು ಕೊಂಡರೆ, ಗೃಹಬಂಧನದಿಂದ ತಪ್ಪಿಸಿಕೊಂಡ ಆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಜೆ ಪಿ ನಗರದಲ್ಲಿ ಜರುಗಿದೆ.

ಬಯೋಡೆಟಾ ಕಾಪಿ ತರುತ್ತೇನೆ ಎಂದು ಮನೆಯಿಂದ ಹೊರಟ ಯುವಕರೊಬ್ಬರು ತಮ್ಮದೇ ಮತ್ತೊಂದು ಮನೆಯಲ್ಲಿ ಯೋಗೇಶ್ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜೆಪಿ ನಗರದ ನಿವಾಸಿ ಯೋಗೇಶ್ ಪಿಯುಸಿ ಅರ್ಧಕ್ಕೆ ನಿಲ್ಲಿಸಿದ್ದನು. ಕೆಲವು ಪೋಲಿ ಯುವಕರ ಸಹವಾಸ ಮಾಡಿದ್ದನು.

ನಂಜನಗೂಡು ಠಾಣೆಯಲ್ಲಿ ಯಾವುದೋ ಹಳೆ ಪ್ರಕರಣ ಬಾಕಿಯಿತ್ತು. ಇದರಿಂದ ಮನೆಯಿಂದ ಹೊರಹೋಗಲು ಪೋಷಕರು ಬಿಡುತ್ತಿರಲಿಲ್ಲ.

ಬುಧವಾರ ಮಧ್ಯಾಹ್ನ ಬಯೋಡೆಟಾ ತರುತ್ತೇನೆ ಎಂದು ಮನೆಯಿಂದ ಹೊರಟ ಯುವಕ ಸಂಜೆಯಾದರೂ ಮನೆಗೆ ಹಿಂದಿರುಗದೇ, ತಮ್ಮದೇ ಇನ್ನೊಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!