ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಮೇಲೆ ನಿಸಾನ್ ಸಾಹಿಬ್ ಧ್ವಜ ಹಾರಿಸಿದ ಯುವಕನ ಪೋಷಕರು ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದು ಹೋಗಿದ್ದಾರೆ.
ಅಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ 23 ವರ್ಷದ ಜುಗ್ ರಾಜ್ ಸಿಂಗ್ ಪಂಜಾಬ್ ನ ವಾನತಾರ ಗ್ರಾಮದವರು. ಪೋಲಿಸರು ಯುವಕ ನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೀಗಾಗಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಭಾವಿಸಿ ಪೋಷಕರು ಗ್ರಾಮ ತೊರೆದಿದ್ದಾರೆ.
ಈಗಾಗಲೇ ಪೋಲಿಸರು ಹಲವು ಬಾರಿ ದಾಳಿ ಮಾಡಿದರೂ ಕೂಡ ಆತನ ಅಜ್ಜ ಮೆಹಲ್ ಸಿಂಗ್ ಹೊರತು ಪಡಿಸಿ ಯಾರೂ ಇಲ್ಲ.
ಈ ಪ್ರಕರಣದಲ್ಲಿ ಜುಗ್ ರಾಜ್ ಸಿಂಗ್ ಧ್ವಜ ಹಾರಿಸುವಂತೆ ಪ್ರೇರಣೆ ನೀಡಿದವರು ಯಾರು ಎಂಬುದನ್ನು ಕೇಂದ್ರ ಸರ್ಕಾರ ರಚನೆ ಮಾಡಿರುವ ಎಸ್ ಐ ಟಿ ಪತ್ತೆ ಮಾಡಲು ಮುಂದಾಗಿದೆ.
ಧ್ವಜ ಹಾರಿಸಿದ ಹಾಗೂ ಗಲಭೆಗೆ ಪ್ರಚೋದನೆ ನೀಡಿದವರಿಗೂ ನೋಟಿಸ್ ಜಾರಿ ಮಾಡಿರುವ ವಿಶೇಷ ತನಿಖಾ ದಳ ( ಎಸ್ ಐ ಟಿ) ತನಿಖೆ ಚುರುಕುಗೊಳಿಸಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ