January 28, 2026

Newsnap Kannada

The World at your finger tips!

sanjana

ಐದು ದಿನ ಪೊಲೀಸ್‌ ವಶಕ್ಕೆ ನಟಿ ಸಂಜನಾ

Spread the love

ಬೆಂಗಳೂರು

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಇನ್ನೂ ಅನೇಕ ತಿರುವು ಕಾಣುವ ಸಾಧ್ಯತೆಯ ನಡುವೆಯೂ
ನಟಿ ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಇನ್ನೂ 5 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ಒಪ್ಪಿಸಿ ೮ ನೇ ಎಸಿಎಂಎ ಕೋರ್ಟ್‌ ಆದೇಶ ನೀಡಿದೆ. ಈ ಮೂಲಕ ಇನ್ನೆಷ್ಟು ಜನರ ಹೆಸರುಗಳು ಬಹಿರಂಗವಾಗಲಿದೆ ಎಂಬ ಕುತೂಹಲ ಕಾಡುತ್ತಿದೆ.

ಸ್ಯಾಂಡಲ್‌ವುಡ್‌ನ ಡ್ರಗ್ಸ್‌ ಪ್ರಕರಣದ ಉರುಳಿಗೆ ಸಿಲುಕುತ್ತಿರುವ ನಟಿಯರ ಪಟ್ಟಿಯಲ್ಲಿ ಮತ್ತೊಂದು ಹೆಸರು ಸೇರಿಕೊಂಡಿದೆ.

ಮಂಗಳವಾರ ಬೆಳಿಗ್ಗೆ ಸಂಜನಾ ಗಲ್ರಾನಿ ಅವರ ಮನೆಯನ್ನು ಸಂಪೂರ್ಣವಾಗಿ ಸಿಸಿಬಿ ಪೊಲೀಸರು ಜಾಲಾಡಿದ್ದರು. ನ್ಯಾಯಾಲಯದ ಅನುಮತಿ ಪಡೆದೇ, ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ್‌ ಹೇಳಿದ್ದರು. ಮನೆಯೊಂದಿಗೆ ಸಂಜನಾ ಅವರ ಐಷಾರಾಮಿ ಬಿಎಂಡಬ್ಲ್ಯೂ ಕಾರ್‌ ಅನ್ನು ಕೂಡಾ ಪರಿಶೀಲನೆ ನಡೆಸಲಾಗಿದೆ.

ಈಗಾಗಲೇ ಸಿಸಿಬಿಯಿಂದ ಬಂಧಿತರಾಗಿರುವ ರಾಹುಲ್‌ ಶೆಟ್ಟಿ ಹೇಳಿಕೆಯ ಆಧಾರದ ಮೇಲೆ ಇಂದಿರಾನಗರದಲ್ಲಿರುವ ಸಂಜನಾ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಸಂಜನಾ ಹಾಗೂ ರಾಹುಲ್‌ ದೇಶ ವಿದೇಶಗಳಲ್ಲಿ ನಡೆದ ಖಾಸಗೀ ಪಾರ್ಟಿಗಳಲ್ಲಿ ಜೊತೆಯಾಗಿ ಭಾಗವಹಿಸಿದ್ದರ ಕುರಿತು ಮಾಹಿತಿಗಳು ಕೂಡಾ ಲಭ್ಯವಾಗಿವೆ.

ಸಿಸಿಬಿ ಮೂಲಗಳಂತೆ ವಿಚಾರಣೆ ವೇಳೆ, ಖಾಸಗಿ ಪಾರ್ಟಿಗಳಲ್ಲಿ ಡ್ರಗ್‌ ಸರಬರಾಜು ಮಾಡಿರುವುದನ್ನು ರಾಹುಲ್‌ ಶೆಟ್ಟಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇವೆಲ್ಲಾ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ಸಂಜನಾ ಅವರ ಮನೆಯನ್ನು ಶೋಧಿಸಿದರು ನಂತರ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈಗ ಕೋರ್ಟ್‌ ಅವರನ್ನು ಐದು ದಿನಗಳ ಕಾಲ ಕಸ್ಟಡಿಗೆ ನೀಡಿದ್ದು, ವಿಚಾರಣೆಯ ವೇಳೆ ಇನ್ನೆಷ್ಟು ಹೆಸರುಗಳು ಬಹಿರಂಗವಾಗುವ ಸಾಧ್ಯತೆಗಳಿವೆ.

ಇನ್ನೋರ್ವ ನಟಿ ರಾಗಿಣಿ ದ್ವಿವೇದಿ ಕೂಡಾ ಪೊಲೀಸರ ಕಸ್ಟಡಿಯಲ್ಲೇ ಇದ್ದಾಳೆ, ಅವರನ್ನು ಕೂಡಾ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸ್ಯಾಂಡಲ್‌ವುಡ್‌ನ ಡ್ರಗ್‌ ಸುಳಿ ಎಷ್ಟು ಜನರನ್ನು ತನ್ನಲ್ಲಿ ಸೇರಿಸಿಕೊಂಡಿದೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ

error: Content is protected !!