February 20, 2026

Newsnap Kannada

The World at your finger tips!

sucide

ರೈತ ಎಂಬ ಕಾರಣಕ್ಕಾಗಿ ಹುಡುಗಿ ಕೊಡಲಿಲ್ಲ : ಮನನೊಂದ ಯುವ ರೈತ ಆತ್ಮಹತ್ಯೆ

Spread the love

ಸಾಲ ಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿದ್ದೇವೆ . ಆದರೆ ಇಲ್ಲೊಬ್ಬ ಯುವ ರೈತ ಮದುವೆಯಾಗಲು ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯವರು ಎಷ್ಟೇ ಹುಡುಕಿದರೂ
ಮದುವೆಗೆ ಕನ್ಯೆ ಸಿಗದ ಹಿನ್ನೆಲೆಯಲ್ಲಿ ಮನನೊಂದ ಯುವ ರೈತ ನೇಣಿಗೆ ಶರಣಾದ ಘಟನೆ ನಂಜನಗೂಡು ತಾಲ್ಲೂಕಿನ ಕಪ್ಪಸೋಗೆಯಲ್ಲಿ ಜರುಗಿದೆ.

ಪ್ರವೀಣ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವ ರೈತ. ಕಳೆದ
ಆರೇಳು ವರ್ಷಗಳಿಂದ ಎಲ್ಲಿ ಹುಡುಕಿದರೂ ಮದುವೆಗೆ ಹೆಣ್ಣು ಸಿಗಲಿಲ್ಲ.

ಕೃಷಿಕ ಎಂಬ ಕಾರಣಕ್ಕಾಗಿ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. . ಇದರಿಂದ ಪ್ರವೀಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಮದುವೆಯಾಗಲಿಲ್ಲ ಎಂಬ ಕೊರಗಿನಿಂದ ಮನೆಯಲ್ಲೇ ಇಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: Content is protected !!