November 25, 2024

Newsnap Kannada

The World at your finger tips!

yuvaraj

ಸಿಲ್ಕ್ ಬೋಡ್೯ ಅಧ್ಯಕ್ಷ ಸ್ಥಾನದ ಆಸೆ: 30 ಲಕ್ಷ ರು ವಂಚಿಸಿದ ಯುವರಾಜ ವಿರುದ್ಧ ಮತ್ತೊಂದು ದೂರು

Spread the love

ಬಿಜೆಪಿ, ಆರ್​ಎಸ್​ಎಸ್​ ನಾಯಕರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಯುವರಾಜ್​ ಅಲಿಯಾಸ್​ ಸ್ವಾಮಿ

ಸಿಲ್ಕ್ ಬೋಡ್೯ ಅಧ್ಯಕ್ಷರನ್ನಾಗಿ ಮಾಡಿಸುವೆ ಎಂದು ಹೇಳಿ ವ್ಯಕ್ತಿ ಯೊಬ್ಬರಿಗೆ 30 ಲಕ್ಷ ರು ವಂಚನೆ ಮಾಡಿರುವ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದ ಹೈಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

ರಾಜ್ಯ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೆಸರಲ್ಲಿ ವಂಚನೆ ಮಾಡಿದ ಆರೋಪ ಮೇರೆಗೆ ಬಿಲ್ಡರ್ ಇನಿತ್ ಕುಮಾರ್ ಎಂಬವರು ದೂರು ನೀಡಿರುವ ಹಿನ್ನೆಲೆಯಲ್ಲಿ ಸ್ವಾಮಿ ವಿರುದ್ದ ಎಫ್​​ಐಆರ್ ದಾಖಲಿಸಲಾಗಿದೆ.

ತಾನು ಸಂತೋಷ್ ಜೀಯವರ ಅಣ್ಣನ ಮಗ ಎಂದು ಪರಿಚಯಿಸಿಕೊಂಡಿರುವ ಯುವರಾಜ್, ಇನಿತ್ ಕುಮಾರ್ ಅವರನ್ನು ರಾಷ್ಟ್ರಮಟ್ಟದಲ್ಲಿ ಯೂತ್ ಐಕಾನ್ ಮಾಡುತ್ತೇನೆ ಎಂದು ನಂಬಿಸಿದ್ದನಂತೆ. ಅಲ್ಲದೇ ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧ್ಯಕ್ಷ ಮಾಡುವುದಾಗಿಯೂ ಹೇಳಿ ಸುಮಾರು 30 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದ ಎಂಬ ಆರೋಪವೂ ಇದೆ.

30 ಕೋಟಿ ರು ಡಿಮ್ಯಾಂಡ್

ಸಿಲ್ಕ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಮೂರು ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿ ಕೊನೆಗೆ 30 ಲಕ್ಷ ರೂಪಾಯಿ ಪಡೆದಿದ್ದ ಎನ್ನಲಾಗಿದೆ.

8 ಎಫ್ ಐ ಆರ್ ದಾಖಲು

ಶಿವಮೊಗ್ಗದವನಾದ ಯುವರಾಜ್ ವಿರುದ್ಧ ಈಗಾಗಲೇ ಸುಮಾರು 8 ಎಫ್​ಐಆರ್ ದಾಖಲಾಗಿದೆ. ಉದ್ಯಮಿ ಸುಧೀಂದ್ರ ರೆಡ್ಡಿ, ಸ್ಯಾಂಡಲ್​​ವುಡ್​ ನಿರ್ಮಾಪಕರೊಬ್ಬರು, ನಿವೃತ್ತ ನ್ಯಾಯಾಧೀಶೆ ಸೇರಿದಂತೆ ಹಲವು ಗಣ್ಯರಿಗೆ ವಂಚನೆ ಮಾಡಿದ್ದಾನೆ.

ಸುಮಾರು 100 ಕೋಟಿ ರು ಅಧಿಕ ಹಣ ಆಸ್ತಿ ಯುವರಾಜ್ ಗಳಿಸಿದ್ದಾನೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಸಿಸಿಬಿ ಆರೋಪಿ ಯುವರಾಜ್​​ನ ಬೆಂಝ್​​ ಹಾಗೂ ರೇಂಜ್​​ ರೋವರ್​​ ಕಾರುಗಳನ್ನು ವಶಕ್ಕೆ ಪಡೆದಿತ್ತು.

Copyright © All rights reserved Newsnap | Newsever by AF themes.
error: Content is protected !!