ಐಟಿ ಉದ್ಯೋಗಿಗಳಿಗೆ ಆಹಾರ ಸಪ್ಲೈ ಮಾಡದೇ ಮೋಸ ಎಸಗಿದ ನಂದಿನಿ ಅಂದರ್

Team Newsnap
1 Min Read

ಬೆಂಗಳೂರಿನಲ್ಲಿ ಐಟಿ ಕಂಪನಿಯ ಉದ್ಯೋಗಿಗಳಿಗೆ ಪಂಗಾನಾಮ‌ ಹಾಕಿದ ಯುವತಿಯನ್ನು ಪೋಲಿಸರು ಬಂಧಿಸಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಐಟಿ ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಾಗಿ ಉದ್ಯೋಗಸ್ಥರಿಗೆ ನಂಬಿಸಿ ಮೋಸ ಮಾಡಿರುವ ಹಿನ್ನೆಲೆಯಲ್ಲಿ ನಂದಿನಿ ಎಂಬಾಕೆ ಕಂಬಿ ಎಣಿಸುತ್ತಿದ್ದಾಳೆ.

ಬಂಧಿತೆ ನಂದಿನಿ, ಐಟಿ ಕಂಪನಿಗಳಿಗೆ ಕಾಫಿ, ಟೀ ಹಾಗೂ ಊಟದ ಸರಬರಾಜು ಮಾಡುತ್ತೇನೆ ಎಂದು ಡೆಪಾಸಿಟ್ ನೆಪದಲ್ಲಿ ಲಕ್ಷಾಂತರ ಹಣ ಪಡೆದಿದ್ದಳು. ಹಣವನ್ನೂ ಕೊಡದೆ ಊಟ ಸರಬರಾಜು ಸಹ ಮಾಡದೇ ಮೋಸ ಮಾಡಿದ್ದಳು.‌

ಕೆಂಪಾಪುರ ವ್ಯಾಪ್ತಿಯ ಅನೇಕರಿಗೆ ಕಾಯಂ ಉದ್ಯೋಗ ನೀಡುವುದಾಗಿ ಹೇಳಿ 1.5 ಲಕ್ಷ ರೂಪಾಯಿ ಮುಂಗಣ ಹಣ ನೀಡುವಂತೆ ಹೇಳಿ ವಂಚಿಸಿದ್ದಾಳೆ. ಮೊದ ಮೊದಲು ಉದ್ಯೋಗಿಗಳಿಗೆ ಹಣ ಪಾವತಿಸಿದ್ದಳು ನಂತರದ ದಿನಗಳಲ್ಲಿ ಹಣ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂಬ ಆರೋಪ ಹಿನ್ನೆಲೆಯಲ್ಲಿ ನಂದಿನಿ ವಿರುದ್ಧ ದೂರು ದಾಖಲಾಗಿದೆ.

ಮೋಸ ಹೋದವರೆಲ್ಲಾ ಅಮೃತ ಹಳ್ಳಿ ಪೋಲಿಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ನಂದಿನಿಯನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

Share This Article
Leave a comment