ಪ್ರೀತಿಸಿ, ಯುವತಿಗೆ ಕೈಕೊಟ್ಟು ಮತ್ತೊಂದು ಹುಡುಗಿಯನ್ನು ಮದುವೆಯಾಗಲು ಮುಂದಾಗಿದ್ದ ವರ ಮಾಹಾಶಯನಿಗೆ ಪ್ರೀತಿಸಿದವಳು ಫೋನ್ ನಲ್ಲಿ ಧಮ್ಕಿ ಹಾಕಿದ್ದೇ ತಡ ಚೌಟ್ರಿ ಬಿಟ್ಟು ಪರಾರಿಯಾದ. ಅದರೆ ಮದುವೆ ಸಿದ್ದವಾಗಿ ನಿಂತಿದ್ದ ವಧುವಿನ ಬಾಳು ಸುಖಾಂತ್ಯ ಕಂಡಿದೆ. ಈ ಸ್ಟೋರಿ ಓದಿ…..
ಶನಿವಾರ ರಾತ್ರಿವೆರೆಗೂ ಮದುವೆ ಸಿದ್ದತೆ ನಡೆದಿತ್ತು. ಸಂಜೆ ಭರ್ಜರಿಯಾಗಿ ರಿಸೆಪ್ಷನ್ ಮುಗಿಸಿದ ಮೇಲೆ ವರ ನಾಪತ್ತೆ. ಮದುವೆ ನಿಲ್ಲಬಾರದು ಅಂತ ಛತ್ರದಲ್ಲೇ ಇದ್ದ ಮತ್ತೋರ್ವ ಯುವಕ ಯುವತಿಯೊಂದಿಗೆ ಸಪ್ತಪದಿ ತುಳಿದ ಘಟನೆ ತರೀಕರೆಯ ಶೃಂಗೇರಿ ಸಮುದಾಯ ಭವನದಲ್ಲಿ ಜರುಗಿದೆ.
ದೋರನಾಳು ಗ್ರಾಮದ ನಿವಾಸಿ ನವೀನ್ಗೆ ಹೊಸದುರ್ಗದ ನಿವಾಸಿ ಸಿಂಧು ಎನ್ನುವ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು.
ಈ ಮದುವೆ ಕಥೆಯಲ್ಲಿ ಇನ್ನೊಂದು ವ್ಯಕ್ತಿಯ ಬೆದರಿಕೆಯಿಂದ ಕಾರಣಕ್ಕಾಗಿ ಮದುವೆ ಅಗಲಿಲ್ಲ.
ವರ ನವೀನ್ ಪ್ರೀತಿಸಿದ ಯುವತಿ ಈ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಹೀಗಾಗಿ ನವೀನ್ ನಿನ್ನೆ ರಿಸೆಪ್ಷನ್ ಮುಗಿಸಿದ ಬಳಿಕ ಛತ್ರದಿಂದಲೇ ನಾಪತ್ತೆಯಾಗಿದ್ದಾನೆ.
ಈ ವಿಚಾರ ತಿಳಿಯುತ್ತಿದ್ದಂತೆ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಅದೇ ಛತ್ರದಲ್ಲಿದ್ದ ತರೀಕೆರೆ ತಾಲೂಕಿನ ನಂದಿ ಗ್ರಾಮದ ನಿವಾಸಿ ಬಿಎಂಟಿಸಿ ಕಂಡಕ್ಟರ್ ಚಂದ್ರು ಎಂಬಾತ ಯುವತಿಯನ್ನು ವರಿಸಿದ. ಶಾಸ್ತ್ರೋಕ್ತವಾಗಿ ಮದುವೆಯೂ ಆದ ಅರುಂಧತಿ ನಕ್ಷತ್ರ ತೋರಿಸಿ ಆ ಯುವತಿ ಬದುಕಿಗೆ ಬೆಳಕಾದ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು