February 22, 2026

Newsnap Kannada

The World at your finger tips!

chitradurga

ಚಿತ್ರದುರ್ಗದ ಬಳಿ ಭೀಕರ ಅಪಘಾತ: ಕ್ರೂಸರ್ ವಾಹನದಲ್ಲಿದ್ದ ಐವರ ಸಾವು

Spread the love

ಕೆಎಸ್ಆರ್ ಟಿಸಿ ಮತ್ತು ಕ್ರೂಸರ್ ವಾಹನ ಮಧ್ಯೆ ಮುಖಾಮುಖಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು‌‌ ಸಾವನ್ನಪ್ಪಿ , 7 ಜನರಿಗೆ ಗಂಭೀರ ಗಾಯಗಳಾದ ಘಟನೆ
ಮೊಳಕಾಲ್ಮೂರಿನ ಬಿ ಜಿ ಕೆರೆ ಗ್ರಾಮದ ಬಳಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಈ ಅಪಘಾತದಲ್ಲಿ ಸತ್ತವರೆಲ್ಲಾ ಕ್ರೂಸರ್ ವಾಹನದಲ್ಲಿದ್ದ ತಿಮ್ಮಣ್ಣ(40), ರತ್ನಮ್ಮ(38), ಮಹೇಶ್(19) ದುರ್ಗಪ್ಪ(16) ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರಿ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ಬೆಂಗಳೂರಿನಿಂದ ಲಿಂಗಸುಗೂರಿನತ್ತ ತೆರಳುತ್ತಿದ್ದ ಬಸ್ ಮುಖಾಮುಖಿ ಡಿಕ್ಕಿಯಾಗಿದೆ.

ಘಟನೆ ಪರಿಣಾಮ ಕ್ರೂಸರ್‌ನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. 7 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!