November 8, 2025

Newsnap Kannada

The World at your finger tips!

csk

ಚೆನೈ ಸೂಪರ್ ಕಿಂಗ್ ಗೆ ಶಾಕ್ ಹರ್ಭಜನ್ ಸಿಂಗ್ ಔಟ್

Spread the love

ನ್ಯೂಸ್ ಸ್ನ್ಯಾಪ್
ಐಪಿಎಲ್ ಲೀಗ್ ಪಂದ್ಯಗಳಿಂದ ಹೊರಗೆ ಉಳಿಯಲು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್
ತಂಡಕ್ಕೆ ಮತ್ತೊಂದು ಶಾಕ್ ನೀಡಿದಂತಾಗಿದೆ.
ಈಗಾಗಲೇ ತಂಡ ಆಟಗಾರರಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು ಹಾಗೂ ವೈಯಕ್ತಿಕ ಕಾರಣದಿಂದ ಟೂರ್ನಿ ಹೊರ ಉಳಿದರೆ, ಈಗ ಹರ್ಭಜನ್ ಕೂಡ ವೈಯಕ್ತಿಕ ಕಾರಣದಿಂದ
ಟೂರ್ನಿ ಯಿಂದ ಹಿಂದೆ ಸರಿಯುತ್ತಿರುವುದಾಗಿ ತಂಡ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಇದು ತಂಡಕ್ಕೆ ಆಘಾತವಾಗಿದೆ.
ಮೂರನೇ ಹಂತದ ಟೆಸ್ಟಿಂಗ್ ನಂತರ ನಾಯಕ ಮಹೇಂದ್ರ ಸಿಂಗ್ ದೋನಿ ಸೇರಿದಂತೆ ಉಳಿದೆಲ್ಲಾ ಆಟಗಾರರು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ. 19 ರಿಂದ 13 ಐಪಿಎಲ್
ಆವೃತ್ತಿ ಆಟಗಳು ಆರಂಭವಾಗಲಿವೆ.

error: Content is protected !!