ಋಷಿ ಮುನಿಗಳ ವೇಷ ಧರಿಸಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿರುವ ಈ ಜೋಡಿಗಳು ಹಿಂದೂಗಳ ಋಷಿ ಪರಂಪರೆಗೆ ಧಕ್ಕೆ ತಂದಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿವಾದ ಹುಟ್ಟಿಕೊಂಡಿದೆ.
ಪ್ರೀ ವೆಡ್ಡಿಂಗ್ ಶೂಟ್ ಎನ್ನುವುದು ಮೋಜಿನ ಒಂದು ಭಾಗ. ಕೇರಳದಲ್ಲಿ ನಡೆದ ಈ ಫೋಟೋ ಶೂಟ್ ಈಗ ವಿವಾದಕ್ಕೆ ಬಂದು ನಿಂತಿದೆ.
ಕೆಲವು ದಿನಗಳ ಹಿಂದೆ ಹಸಿಬಸಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿ ದಂಪತಿಗಳಿಗೆ ನೆಟ್ಟಿಗರು ಗ್ರಹಚಾರ ಬಿಡಿಸಿದ್ದರು. ಈಗ ಋಷಿ ಮುನಿಗಳ ವೇಷ ಹಾಕಿ ವಧು ವರರು ಮೈ ಚಳಿ ಬಿಟ್ಟು ಫೋಟೋ ಶೂಟ್ ಮಾಡಿಸಿಕೊಂಡಿರುವುದು ಹಿಂದೂ ಧರ್ಮಕ್ಕೆ ಅಪಮಾನ ಮಾಡಿದಂತಾಗಿದೆ ಎನ್ನುವುದು ಹಿಂದೂ ಸಂಘಟನೆಗಳ ವಾದ.
ಋಷಿ ಮತ್ತು ಪ್ರೇಯಸಿ ವೇಷ ಹಾಕಿ ಕೇರಳ ಸುಂದರ ಪರಿಸರ, ಕಾಡು, ನದಿ ತೀರಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಒಬ್ಬ ಋಷಿ ಹೀಗೆಲ್ಲಾ ಉನ್ಮಾದ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು ಎನ್ನುವುದನ್ನು ತೋರಿಸುವ ದುರುದ್ದೇಶ ಈ ಫೋಟೋ ಶೂಟ್ ನಲ್ಲಿ ಅಡಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ತರಾಟೆ ತೆಗೆದುಕೊಳ್ಳಲಾಗಿದೆ.
ವೈಶಾಲಿ ಚಿತ್ರದ ಪ್ರೇರಣೆ:
ಕೇರಳದ ರುಗ್ವೆದಾ ಬುಟಿಕ್ ಸಂಸ್ಥೆ ಮೂಲಕ ತಯಾರಿಸಲಾದ ಈ ಫೋಟೋ ಶೂಟ್ ಅನ್ನು 1988 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ವೈಶಾಲಿ ಮಾದರಿಯಲ್ಲಿ ಚಿತ್ರಿಸಲಾಗಿದೆ ಅಂತೆ.
ಅಭಿಜಿತ್ – ಜಿತು ಜೋಡಿ:
ಅಭಿಜಿತ್ ಮತ್ತು ಜಿತು ಮಕ್ಕು ಮಾಯಾ ಎಂಬ ಜೋಡಿಯು ನಿಜವಾಗಿ ಮದುವೆಯಾಗಲಿರುವ ಜೋಡಿಯೋ ಅಥವಾ ಆರ್ಟಿಸ್ಟ್ ಗಳು ಇರಬಹುದೇ ಎಂಬ ಸಂಶಯ ಮೂಡಿದೆ.
ಸಂಸ್ಕೃತಿಗಳೇ ಇಲ್ಲದ ಇಂತಹ ಫೋಟೋ ಶೂಟ್ ನಿಂದಲೇ ಸಮಾಜದ ಸ್ವಾಸ್ಥ್ಯ ಹಾಳಾಗುವುದಕ್ಕೆ ಸಾಕ್ಷಿ ಇದಕ್ಕಿಂತ ಬೇಕೆ?
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.