November 16, 2024

Newsnap Kannada

The World at your finger tips!

free , bus , pass

Free bus pass - only up to 50 K.M from home ? ಉಚಿತ ಬಸ್ ಪಾಸ್ - ಮನೆಯಿಂದ 50 K.M ವರೆಗೆ ಮಾತ್ರ ?

ಸಾರಿಗೆ ಸಂಚಾರ ಎಂದಿನಂತೆ: 4 ದಿನ ಮುಷ್ಕರ – 53 ಕೋಟಿ ಲಾಸ್

Spread the love

ಸಾರಿಗೆ ಮುಷ್ಕರಕ್ಕೆ ನೌಕರರು ಅಂತ್ಯ ಹಾಡಿ ನಿನ್ನೆ ಸಂಜೆಯಿಂದಲೇ ಬಸ್ ಸಂಚಾರ ಆರಂಭಿಸಿದರು.

ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಎಲ್ಲಾ ಬಸ್ ನಿಲ್ದಾಣ ಗಳಿಂದಲೂ ಸಂಚಾರ ಆರಂಬಾವಾಗಿದೆ. ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರಿನಿಂದ ಹೊರಡುವ ಮತ್ತು ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಬರುವ ಬಸ್ ಎಂದಿನಂತೆ ಸಂಚಾರ ಶುರುವಾಗಿದೆ. ಆಲ್ಲದೇ ರಾಜ್ಯದ 4 ನಿಗಮಗಳ ಬಸ್ ಗಳ ಸಂಚಾರ ಕೂಡ ನಿರಾತಂಕವಾಗಿದೆ.

ಕಳೆದ ನಾಲ್ಕು ದಿನಗಳ ಮುಷ್ಕರ ದಿಂದಾಗಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೆ ಅಂದಾಜು 53 ಕೋಟಿ ನಷ್ಟ ಉಂಟಾಗಿದೆ.

53 ಕೋಟಿ ರು. ನಷ್ಟ

ಕೆಎಸ್ ಆರ್ ಟಿಸಿ ಗೆ 16 ಕೋಟಿ,
ಬಿಎಂಟಿಸಿ ಗೆ 8.4 ಕೋಟಿ,
ಎನ್ ಡಬ್ಲೂ ಕೆ ಆರ್ ಟಿಸಿ14 ಕೋಟಿ ಹಾಗೂ ಎನ್ ಇ ಕೆ ಎಸ್ ಆರ್ ಟಿ 15 ಕೋಟಿ ರು ನಷ್ಟ ವಾಗಿದೆ ಎಂದು ಹೇಳಲಾಗಿದೆ. ಅಲ್ಲದೆ 50 ಕ್ಕೂ ಹೆಚ್ಚು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವುದರಿಂದ ಆ ನಷ್ಟವನ್ನು ಕೂಡ. ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ.
ಈ ನಡುವೆ ಸರ್ಕಾರ ಸಾರಿಗೆ ನೌಕರರ 10 ಬೇಡಿಕೆಗಳ ಪೈಕಿ 9 ಬೇಡಿಕೆ ಒಪ್ಪಿಕೊಂಡಿರುವ ಕಾರಣಕ್ಕಾಗಿ ನೌಕರರು ಖುಷಿಯಾಗಿದ್ದಾರೆ.

ಈ ನಡುವೆ ಮೂರು ತಿಂಗಳಲ್ಲಿ ಎಲ್ಲಾ ಬೇಡಿಕೆಗಳು ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಗಡುವು ಕೂಡ ನೀಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!