ಮೈಸೂರು ಮತ್ತು ಮಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭವಾದ ಬೆನ್ನಲ್ಲೇ
ಅಂಚೆ ಇಲಾಖೆಯಿಂದ “Flight Special Cover” ಅನ್ನು ಮೈಸೂರು ಮತ್ತು ಮಂಗಳೂರು ನಿಂದ ರವಾನಿಸುವ ವ್ಯವಸ್ಥೆಯೂ ಆರಂಭವಾಯಿತು.
ಅಂಚೆ ಇಲಾಖೆಯ ASP ರಾಜುಕಾಳೇಶ್ವರ್ ರವರು ಮೊದಲ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣಿಸಿ, ಮೈಸೂರು ಅಂಚೆ ವಿಭಾಗದ ವಿಶೇಷ ಲಕೋಟೆಯನ್ನು ಮಂಗಳೂರು ಅಂಚೆ ವಿಭಾಗಕ್ಕೆ ತಲುಪಿಸಿ, ಮಂಗಳೂರು ಅಂಚೆ ವಿಭಾಗದ ವಿಶೇಷ ಲಕೋಟೆಯನ್ನು ಮೈಸೂರಿಗೆ ತಂದಿದ್ದಾರೆ.
ಎರಡೂ ಕಡೆಯಿಂದ ಪ್ರಯಾಣದ ಅವಧಿ ಕೇವಲ ಮೂರು ಘಂಟೆಗಳು.
ಎ.ಕೆ. ನಾಯ್ಕ್ (ಹಿರಿಯ ಅಂಚೆ ಅಧೀಕ್ಷಕರು, ಮೈಸೂರು ಅಂಚೆ ವಿಭಾಗ, ) ವಿಮಾನ ನಿಲ್ದಾಣದಲ್ಲಿ, ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ ಹಾಗು Air Alliance CEO ಹರ್ ಪ್ರೀತ್ ಸಿಂಗ್ ಅವರೊಂದಿಗೆ ASP ರಾಜುಕಾಳೇಶ್ವರ್ ರವರಿಗೆ ವಿಶೇಷ ಲಕೋಟೆಯುಳ್ಳ ಬ್ಯಾಗನ್ನು ಹಸ್ತಾಂತರಿಸಿದರು.
ಸಿಇಒ ಹರ್ ಪ್ರೀತ್ ಸಿಂಗ್
ರಾಜುಕಾಳೇಶ್ವರ್ ರವರಿಗೆ ಬೋರ್ಡಿಂಗ್ ಪಾಸ್ ಅನ್ನು ಹಸ್ತಾಂತರಿಸಿದರು.
ಈ ವಿಶೇಷ ಲಕೋಟೆಗಳು ಮೈಸೂರು ಮತ್ತು ಮಂಗಳೂರು ದಿನಾಂಕ ಮುದ್ರೆಗಳಲ್ಲದೆ (Pictorial Cancelation ಸಹ) ASP ರಾಜುಕಾಳೇಶ್ವರ್ ರವರ ಸಹಿಯನ್ನು ಹೊಂದಿರತ್ತದೆ.
ಮೈಸೂರು ಪ್ರದಾನ ಅಂಚೆ ಕಛೇರಿಯ Philately Bureau ದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಮೂಲಕ ಮೈಸೂರು ಅಂಚೆ ವಿಭಾಗ ಒಂದು ವಿಶೇಷ ಸಂದರ್ಭದ ಭಾಗಿ ಗಮನಸೆಳೆದಿದೆ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ