ಈ ಕುಮಾರಸ್ವಾಮಿ ಮತ್ತು ಡಿಕೆಶಿ ಸೇರಿ ನನ್ನನ್ನು ಸೋಲಿಸಿದರು. ಆ ನೋವು ನನ್ನ ಮನಸ್ಸಿನಲ್ಲಿ ಕೊತ ಕೊತ ಕುದಿಯುತ್ತಿತ್ತು. ಕೊನೆಗೆ ಸರಿಯಾಗಿ ಸ್ಕೆಚ್ ಹಾಕಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಪತಥನಗೊಳಿಸಿ ಸೇಡು ತೀರಿಸಿಕೊಂಡೆ.
ಇದು ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ಹಾಗೂ ಡಿಕೆಶಿ ವಿರುದ್ಧ ನಡೆಸಿದ ವಾಗ್ದಾಳಿ ಆಡಿಯೋ ಸಂಭಾಷಣೆಯ ತುಣುಕು.
ಇಬ್ಬರಿಗೂ ರಾಜಕೀಯ ರಣರಂಗದ ಯುದ್ಧಕ್ಕೆ ಆಹ್ವಾನಿಸಿದ್ದಾರೆ ಕುಮಾರ ಸ್ವಾಮಿಗೆ ರಾಜಕೀಯ ಭಯ ಶುರುವಾಗಿದೆ. ಅವರ ಪಕ್ಷ ಈಗ ಮುಳುಗುವ ಹಡಗು. ಈ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಜೊತೆಗೆ ರಾಜಕೀಯವಾಗಿ ಚೆನ್ನಾಗಿದ್ದಾರೆ. ಇದು ಬಹಳ ನಡೆಯದು ಎಂದಿದ್ದಾರೆ.
ಏಕ ವಚನದಲ್ಲಿ ವಾಗ್ದಾಳಿ
ಚನ್ನಪಟ್ಟಣ ತಾಲೂಕಿನಲ್ಲಿ ಗ್ರಾ.ಪಂ ಚುನಾವಣೆ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿರುವ ಯೋಗೇಶ್ವರ್ ಸಭೆಯಲ್ಲಿ ಹೆಚ್.ಡಿ.ಕೆ – ಡಿ.ಕೆ.ಶಿ ವಿರುದ್ಧ ಹೀನಾಮಾನವಾಗಿ ಏಕವಚನದಲ್ಲಿ ವಾಗ್ದಾಳಿ ಮಾಡಿರುವುದು ವೈರಲ್ ಆಗಿದೆ.
ಅಭಿ ಪಿಕ್ಚರ್ ಬಾಕಿ ಹೈ!
ಈ ಇಬ್ಬರನ್ನು ಜನ ನಂಬುತ್ತಿಲ್ಲ, ಮುಂದೆ ಯೋಗೇಶ್ವರ್ ಅಂತಾ ಎಲ್ಲರಿಗೂ ಗೊತ್ತಾಗಲಿದೆ. ನಾನು ಚನ್ನಪಟ್ಟಣಕ್ಕೆ ಸೀಮಿತವಾಗಬಾರದೆಂದೇ ಇವರಿಬ್ಬರು ಸೇರಿ ಮಾಡಿದ್ದ ಸರ್ಕಾರ ತೆಗೆದೆ. ಈಗ ನಾನ್ಯಾರು ಎಂದು ಇಬ್ಬರಿಗೂ ಗೊತ್ತಾಗಿದೆ. ಮುಂದೆ ಇನ್ನು ಪಿಕ್ಚರ್ ಬಾಕಿ ಹೈ ಎಂದು ಅಬ್ಬರಿಸಿದ್ದಾರೆ.
ಇಬ್ಬರೂ ಒಂದಾಗಿ ಸೋಲಿಸಿದರು:
ಚನ್ನಪಟ್ಟಣದಲ್ಲಿ ಹೆಚ್ಡಿಕೆ – ಡಿಕೆಶಿ ಒಂದಾಗಿ ನನ್ನನ್ನ ಸೋಲಿಸಿದರು. ಅವರನ್ನು ಜನ ಜೋಡೆತ್ತು ಅಂತಿದ್ದರು. ಇವತ್ತು ಇಬ್ಬರು ಬೇರೆಯಾಗಿದ್ದಾರೆ. ನನ್ನ ನೀರಾವರಿ ಯೋಜನೆಗಳನ್ನು ಕುಮಾರಸ್ವಾಮಿ ನನ್ನದು ಅಂತಿದ್ದಾರೆ. ನಾನು ಬೇಕಾದರೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ, ಅವರು ಪೇಪರ್ ನೋಡದೇ ಚನ್ನಪಟ್ಟಣದ 10 ಊರಿನ ಹೆಸರು ಹೇಳಲಿ ಸಾಕು ಎಂದು ಹೆಚ್ಡಿಕೆ ಗೆ ಸವಾಲು ಹಾಕಿದರು.
ಎರಡೂ ಕುಟುಂಬಗಳಿಗೆ ಜನ ಪಾಠ ಕಲಿಸಿದ್ದಾರೆ:
ರಾಜ್ಯದ ಜನ ದೇವೇಗೌಡರ ಕುಟುಂಬವನ್ನು, ಡಿಕೆಶಿ ಕುಟುಂಬವನ್ನು ಸಾಕಬೇಕಾಗಿತ್ತು ಕೈ ಬಿಟ್ಟಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ. ದೇವೇಗೌಡ ರನ್ನು ಹಾಗೂ ನಿಖಿಲ್ ಕುಮಾರಸ್ವಾಮಿ ಯನ್ನು ಜನ ಸೋಲಿಸಿದ್ದಾರೆ, ಈಗ ನಡೆದ ಉಪ ಚುನಾವಣೆಯಲ್ಲಿ ಡಿಕೆ ಅಣ್ಣ-ತಮ್ಮನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಸೇಡಿಗೆ- ಸೇಡು ಮೈತ್ರಿ ಮುರಿದಿದ್ದು ನಾನೇ:
ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ನಲ್ಲಿ ಕುಳಿತು ಅಧಿಕಾರ ಮಾಡಿದ್ದರು. ಅಲ್ಲಿಂದ ಸರ್ಕಾರದಲ್ಲಿ ಅಪಸ್ವರ ಶುರುವಾಯಿತು. ನಾನು ಕಾಯ್ದು ಬೆಂಗಳೂರಿನಲ್ಲೇ ಕೂತ್ಕೊಂಡು ಸ್ಕೆಚ್ ಹಾಕಿ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸಿದೆ. ಇವನಿಗೆ ಮಾಡಿ ತೋರಿಸಬೇಕೆಂದೇ ಸಿಎಂ ಸ್ಥಾನದಿಂದ ಇಳಿಸಿದೆ. ಕುಮಾರಸ್ವಾಮಿಯನ್ನು ನಾನೇ ಇಳಿಸಿದೆ ಎನ್ನುವ ಮೂಲಕ ಮೈತ್ರಿ ಸರ್ಕಾರ ಕೆಡವಿದ್ದು ನಾನೇ ಎಂದಿದ್ದಾರೆ.
ಚನ್ನಪಟ್ಟಣದವರ ಶಕ್ತಿ ಗೊತ್ತಾಗಿದೆ:
ಇನ್ನು ಅವನ್ಯಾವನೋ ಎಂಪಿ ಡಿ.ಕೆ ಸುರೇಶ್ ಒಂದು ಕಡೆ ಮಾತನಾಡಿ, ಈ ಯೋಗೇಶ್ವರ್ ಯಾರು ಅಂತ ಗೊತ್ತಿಲ್ಲ ಅಂದಿದ್ದ. ಆದರೆ ಈಗ ಚನ್ನಪಟ್ಟಣದವರ ಶಕ್ತಿ ಏನೆಂದು ಗೊತ್ತಾಗಿದೆ. ಅಣ್ಣ-ತಮ್ಮನಿಗೆ, ದೇವೇಗೌಡರ ಮನೆಯವರಿಗೆ ನನ್ನ ಬಗ್ಗೆ ಅರ್ಥ ಆಗಿದೆ. ಯಾಕಪ್ಪ ಯೋಗೇಶ್ವರ್ ಸಹವಾಸಕ್ಕೆ ಹೋದೆವೂ ಎಂದು ಅನಿಸಿದೆ. ಸರ್ಕಾರ ಹೋಗ್ತಿದ್ದಂಗೆ ಶಿವಕುಮಾರ್ ತಿಹಾರ್ ಜೈಲಿಗೆ ಹೋದ. ಆ ಜೈಲಿಗೆ ಹೋದ ಕರ್ನಾಟಕದವನು ಒಬ್ಬನೆ ಶಿವಕುಮಾರ. ಆದರೆ ಅವನು ಈಗ ಕೆ.ಪಿ.ಸಿ.ಸಿ ಅಧ್ಯಕ್ಷ, ಅವನ ತಮ್ಮ ಎಂಪಿ ಸುರೇಶ ಎಂದು ಲೇವಡಿ ಮಾಡಿದ್ದಾರೆ.
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ